×
Ad

2020ರ ಈಶಾನ್ಯ ದಿಲ್ಲಿ ಗಲಭೆ ಪ್ರಕರಣ: 8 ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

Update: 2021-09-12 02:52 IST

ಹೊಸದಿಲ್ಲಿ: 2020 ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯ ನಡೆದ ಗಲಭೆ ಸಂದರ್ಭ ಬೆಂಕಿ ಹಚ್ಚಿದ ಆರೋಪಕ್ಕೆ ಒಳಗಾಗಿರುವ 8 ಮಂದಿಯನ್ನು ದಿಲ್ಲಿ ಉಚ್ಚ ನ್ಯಾಯಾಲಯ ಖುಲಾಸೆಗೊಳಿಸಿದೆ.

ಆರೋಪಿಗಳನ್ನು ಬಿಡುಗಡೆ ಮಾಡಿದೆ ಹೆಚ್ಚುವರಿ ಸತ್ರ ನ್ಯಾಯಾಲಯದ ನ್ಯಾಯಾಧೀಶ ವಿನೋದ್ ಯಾದವ್, ಅವರ ವಿರುದ್ಧದ ಯಾವುದೇ ಸಿಸಿಟಿವಿ ದೃಶ್ಯಾವಳಿ ಇಲ್ಲ ಹಾಗೂ ಅವರನ್ನು ಯಾವುದೇ ದೂರುದಾರ ಗುರುತಿಸಿಲ್ಲ ಎಂದು ಹೇಳಿದೆ.

ಈಶಾನ್ಯ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಸಂಭವಿಸಿದ ಸಂದರ್ಭ ಗಲಭೆ ಕೋರ ಗುಂಪು ತಮ್ಮ ಅಂಗಡಿಗಳನ್ನು ದಾಂಧಲೆ ನಡೆಸಿತು ಹಾಗೂ ಲೂಟಿ ಮಾಡಿತು ಎಂದು ಆರೋಪಿಸಿ ಹಲವು ಅಂಗಡಿ ಮಾಲಕರು ಸಲ್ಲಿಸಿದ 12 ದೂರುಗಳ ಆಧಾರದಲ್ಲಿ ಈ 8 ಮಂದಿಯನ್ನು ಬಂಧಿಸಲಾಗಿತ್ತು.

ಅವರ ವಿರುದ್ಧ ದಾಖಲಿಸಲಾದ ಇತರ ಪ್ರಕರಣಗಳ ವಿಚಾರಣೆ ವೇಳೆ ಅವರು ನೀಡಿದ ಹೇಳಿಕೆ ಹಾಗೂ ಪೊಲೀಸ್ ಕಾನ್ ಸ್ಟೇಬಲ್ ಗಳ ಗುರುತು ಪತ್ತೆಯ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು.

12 ಮಂದಿ ದೂರುದಾರರು ತಮ್ಮ ಲಿಖಿತ ದೂರಿನಲ್ಲಿ ಇದಕ್ಕೆ ಸಂಬಂಧಿಸಿ ಏನನ್ನೂ ಹೇಳಿಲ್ಲ. ಆದುದರಿಂದ ಪೊಲೀಸ್ ಕಾನ್ ಸ್ಟೇಬಲ್ ಗಳ ಹೇಳಿಕೆಯ ಆಧಾರದಲ್ಲಿ ಅವರ ವಿರುದ್ಧ ಐಪಿಸಿ ಸೆಕ್ಷನ್ 436ನ್ನು ಅನ್ವಯಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ನ್ಯಾಯಾಲಯ 8 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಿತು.

ತಮ್ಮ ಅಂಗಡಿಗಳಲ್ಲಿ ದಾಂಧಲೆ ನಡೆಸಿದವರು ಗಲಭೆಕೋರರ ಭಾಗವಾಗಿದ್ದರು ಎಂಬುದನ್ನು ಯಾವುದೇ ದೂರುದಾರರು ಗುರುತಿಸಿಲ್ಲ ಎಂಬುದು ಲಿಖಿತ ದೂರಿನ ವಿಶ್ಲೇಷಣೆ ಬಹಿರಂಗಪಡಿಸಿದೆ ಎಂದು ಸತ್ರ ನ್ಯಾಯಾದೀಶರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News