×
Ad

ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್ ಲೋಕಾರ್ಪಣೆ

Update: 2021-09-12 16:56 IST

ಮಂಗಳೂರು: ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ನಾಲ್ಕನೇ ವರ್ಷಾಚರಣೆ ಪ್ರಯುಕ್ತ ಲಯನ್ಸ್ ಕ್ಲಬ್ ಸೆಂಚುರಿಯನ್ ಮಂಗಳೂರು ಇದರ ಸಹಭಾಗಿತ್ವದಲ್ಲಿ ಬಂದರ್ ಮಸ್ಜಿದ್ ಝೀನತ್ ಬಕ್ಸ್‌ನ ಮಾಜಿ ಅಧ್ಯಕ್ಷ ದಿ.ಸಿ.ಅಬ್ದುಲ್ ಹಮೀದ್ ಸಾಹೇಬ್‌ರ ಸ್ಮರಣಾರ್ಥ ನಿರ್ಮಿಸಲಾದ ಸಾರ್ವಜನಿಕ ಕುಡಿಯುವ ನೀರಿನ ಟ್ಯಾಂಕ್‌ನ ಲೋಕಾರ್ಪಣೆ ಕಾರ್ಯಕ್ರಮವು ಶನಿವಾರ ಕುದ್ರೋಳಿ ಆಟೋರಿಕ್ಷಾ ಪಾರ್ಕ್ ಬಳಿ ನಡೆಯಿತು.

ನಡುಪಲ್ಲಿಯ ಖತೀಬ್ ರಿಯಾಝ್ ಫೈಝಿ ಕಕ್ಕಿಂಜೆ ದುಆಗೈದರು. ಇರ್ಷಾದ್ ದಾರಿಮಿ ಅಲ್ಅಝ್ಹರಿ ಮಿತ್ತಬೈಲ್ ನೀರಿನ ಟ್ಯಾಂಕ್ ಲೋಕಾರ್ಪಣೆಗೈದರು.

ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್, ಕಾರ್ಪೊರೇಟರ್ ಶಂಸುದ್ದೀನ್ ಮಾತನಾಡಿದರು. ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್‌ನ ಸ್ಥಾಪಕಾಧ್ಯಕ್ಷ ಅಬ್ದುಲ್ ರವೂಫ್ ಬಂದರ್ ಅಧ್ಯಕ್ಷತೆ ವಹಿಸಿದ್ದರು.

ಮಾಜಿ ಕಾರ್ಪೋರೇಟರ್‌ಗಳಾದ ಅಬೂಬಕ್ಕರ್ ಕುದ್ರೋಳಿ, ಅಬ್ದುಲ್ ಅಝೀಝ್, ಎಸ್‌ಡಿಪಿಐ. ಕುದ್ರೋಳಿ ವಾರ್ಡ್ ಅಧ್ಯಕ್ಷ ಮುಝೈರ್, ಆಸೀಫ್ , ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಅರ್ಷದ್ ಪೋಪಿ , ಕುದ್ರೋಳಿ ಆಟೋರಿಕ್ಷಾ ಪಾರ್ಕ್ ಅಧ್ಯಕ್ಷ ಝುಬೈರ್ ಅಹ್ಮದ್, ಹನೀಫ್ ಮಾಸ್ಟರ್ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News