×
Ad

ಕಬ್ಬು ಬೆಲೆ ಹೆಚ್ಚಿಸಿ, ಪ್ರಧಾನಿ ಕಿಸಾನ್ ಮೊತ್ತ ದ್ವಿಗುಣಗೊಳಿಸಿ: ಉತ್ತರಪ್ರದೇಶ ಸಿಎಂಗೆ ವರುಣ್ ಗಾಂಧಿ ಪತ್ರ

Update: 2021-09-12 18:50 IST

ಹೊಸದಿಲ್ಲಿ: ಟ್ವೀಟ್ ಮೂಲಕ ಪ್ರತಿಭಟನನಿರತ ರೈತರಿಗೆ ಬೆಂಬಲವನ್ನು ವ್ಯಕ್ತಪಡಿಸಿದ ಒಂದು ವಾರದ ನಂತರ ಬಿಜೆಪಿ ಸಂಸದ ವರುಣ್ ಗಾಂಧಿ ರಾಜ್ಯದ ರೈತರಿಗೆ ವಿವಿಧ ಪರಿಹಾರ ಕ್ರಮಗಳನ್ನು ಕೋರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ

ಕಬ್ಬಿನ ಬೆಲೆಗಳಲ್ಲಿ ಗಣನೀಯ ಏರಿಕೆ, ಗೋಧಿ ಹಾಗೂ  ಭತ್ತದ ಮೇಲೆ ಬೋನಸ್, ಪಿಎಂ ಕಿಸಾನ್ ಯೋಜನೆ ಹಾಗೂ  ಡೀಸೆಲ್ ಮೇಲಿನ ಸಬ್ಸಿಡಿಯ ಮೊತ್ತವನ್ನು ದ್ವಿಗುಣಗೊಳಿಸುವಂತೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ವರುಣ್ ಗಾಂಧಿ ಅವರು ತಮ್ಮ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿರುವ ಪತ್ರದಲ್ಲಿ ಉತ್ತರ ಪ್ರದೇಶದಲ್ಲಿ ಕಬ್ಬು ಮಾರಾಟ ಬೆಲೆಯನ್ನು ಕ್ವಿಂಟಾಲ್‌ಗೆ ರೂ. 315 ರಿಂದ ರೂ. 400 ಕ್ಕೆ ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.

ರೈತರು ಸಂಕಷ್ಟದಲ್ಲಿದ್ದಾರೆ ಎಂದು ಹೇಳಿರುವ ಅವರು, ಗೋಧಿ ಹಾಗೂ  ಭತ್ತದ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಗಿಂತ ಕ್ವಿಂಟಾಲ್‌ಗೆ 200 ರೂಗಳ ಹೆಚ್ಚುವರಿ ಬೋನಸ್ ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News