ಅಡ್ಡೂರು ಆಯಿಷಾ ಮಸ್ಜಿದ್ ಅಧ್ಯಕ್ಷರಾಗಿ ಶಾಫಿ ಕೊಯ್ಯಾರ್ ಆಯ್ಕೆ
Update: 2021-09-12 18:55 IST
ಬಂಟ್ವಾಳ : ಸೌತ್ ಕರ್ನಾಟಕ ಸಲಫಿ ಮೂವ್ಮೆಂಟ್ ಮಂಗಳೂರು ಇದರ ಅಧೀನದಲ್ಲಿರುವ ಆಯಿಷಾ ಸಿದ್ದಿಖಾ (ರ) ಮಸ್ಜಿದ್ ಅಡ್ಡೂರು ಇದರ ಮಹಾಸಭೆಯು ಇತ್ತೀಚೆಗೆ ಜರುಗಿದ್ದು ಅಧ್ಯಕ್ಷರಾಗಿ ಮುಹಮ್ಮದ್ ಶಾಫಿ ಕೊಯ್ಯಾರ್ ಅವರು ಸತತವಾಗಿ ಹತ್ತನೇ ಬಾರಿಗೆ ಆಯ್ಕೆಗೊಂಡರು.
ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಕಮ್ಮಾಜೆ ಹಾಗೂ ಉಪಾಧ್ಯಕ್ಷರಾಗಿ ಅಕ್ಬರ್ ಗೇಟ್, ಉಮರ್ ಫಾರೂಕ್, ಸಹ ಕಾರ್ಯದರ್ಶಿಯಾಗಿ ಇಬ್ರಾಹೀಂ ಎ.ಎನ್, ಖಜಾಂಚಿಯಾಗಿ ಯೂಸುಫ್ ಅಡ್ಡೂರು, ದಾವಾ ಕಾರ್ಯದರ್ಶಿಯಾಗಿ ಬದ್ರುದ್ದಿನ್ ತೋಡಾರ್ ಆಯ್ಕೆಗೊಂಡರು.
ಆಡಳಿತ ಸಮಿತಿಯ ಸದಸ್ಯರಾಗಿ ಎ.ಕೆ. ಇಸ್ಮಾಯೀಲ್, ಡಿ.ಎಸ್. ಮುಹಮ್ಮದ್, ಎನ್.ಇಸ್ಮಾಯೀಲ್ ನಂದ್ಯಾ, ಅಬ್ದುಲ್ ಸಲಾಂ ಗೋಳಿಪಡ್ಪು, ಸಿದ್ದಿಕ್ ನೂಯಿ, ಹಬೀಬ್ ಸಲ್ಲಾಜೆ, ಆಯ್ಕೆಗೊಂಡಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.