×
Ad

ತುಂಬೆ ಪಿಎಫ್ ಬಿಡಿಎಫ್ ನಿಂದ ರಕ್ತದಾನ ಶಿಬಿರ

Update: 2021-09-12 18:57 IST

ಬಂಟ್ವಾಳ, ಸೆ.12: ಪಾಪ್ಯುಲರ್ ಫ್ರಂಟ್ ಬ್ಲಡ್ ಡೊನರ್ಸ್ ಫೋರಂ (ಪಿಎಫ್ ಬಿಡಿಎಫ್) ತುಂಬೆ ಹಾಗೂ ಫಾದರ್ ಮುಲ್ಲರ್ ಹಾಸ್ಪಿಟಲ್ ತುಂಬೆ ಇದರ ಸಹಯೋಗದೊಂದಿಗೆ ಮರ್ಹೂಮ್ ಹಮೀದ್ ಮುಸ್ಲಿಯಾರ್ ಮತ್ತು ಡಾ. ಕೆ.ಎಸ್.ಅಮೀರ್ ಅಹ್ಮದ್ ತುಂಬೆ ಸ್ಮರಣಾರ್ಥ ಸಾರ್ವಜನಿಕ ರಕ್ತದಾನ ಶಿಬಿರ ರವಿವಾರ ಬೆಳಗ್ಗೆ ತುಂಬೆ ಫಾದರ್ ಮುಲ್ಲರ್ ಹಾಸ್ಪಿಟಲ್ ನಲ್ಲಿ ನಡೆಯಿತು. 

ಕಾರ್ಯಕ್ರಮವನ್ನು ತುಂಬೆ ಜುಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಫೈಝಿ ಉದ್ಘಾಟಿಸಿದರು‌. ತುಂಬೆ ಫಾದರ್ ಮುಲ್ಲರ್ ಹಾಸ್ಪಿಟಲ್ ನ ಆಡಳಿತ ನಿರ್ದೇಶಕ ಫಾದರ್ ಸಿಲ್ವೆಸ್ಟರ್ ವಿನ್ಸೆಂಟ್ ಲೋಬೋ, ತುಂಬೆ ಎಸ್ಸೆಸ್ಸೆಫ್ ಅಧ್ಯಕ್ಷ ಮುಸ್ತಾಕ್ ಮದನಿ, ಕ್ರಿಯೇಟಿವ್ ಫೌಂಡೇಶನ್ ಮಂಗಳೂರು ಇದರ ಸಲಹೆಗಾರ ಅಕ್ಬರ್ ಅಲಿ ಪೊನ್ನೋಡಿ ಮಾತನಾಡಿದರು. 

ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ತುಂಬೆ ಇದರ ಅಧ್ಯಕ್ಷ ಸಿರಾಜುದ್ದೀನ್ ತುಂಬೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತ ಪತ್ರಕರ್ತ ಇಮ್ತಿಯಾಝ್ ಶಾ ತುಂಬೆ ಅವರನ್ನು ಸನ್ಮಾನಿಸಲಾಯಿತು.

ಪಿಎಫ್ ಐ ಬಂಟ್ವಾಳ ತಾಲೂಕು ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಗೂಡಿನಬಳಿ, ಪಿಎಫ್ ಐ ಫರಂಗಿಪೇಟೆ ಡಿವಿಷನ್ ಅಧ್ಯಕ್ಷ ನಝೀರ್ ಫರಂಗಿಪೇಟೆ, ಪಿಎಫ್ ಐ ತುಂಬೆ ವಲಯ ಅಧ್ಯಕ್ಷ ಸಂಶುದ್ದೀನ್ ತುಂಬೆ, ತುಂಬೆ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ಅಝೀಝ್, ಝಹೂರ್ ಅಹ್ಮದ್ ಉಪಸ್ಥಿತರಿದ್ದರು.

ಪಿ.ಎಫ್.ಬಿ.ಡಿ.ಎಫ್. ಸದಸ್ಯ ಇರ್ಫಾನ್ ತುಂಬೆ ಸ್ವಾಗತಿಸಿದರು. ಪಿ.ಎಫ್.ಐ. ಮುಖಂಡರಾದ ಅಕ್ಬರ್ ವಳವೂರು ವಂದಿಸಿದರು. ಸುವಾಝ್ ತುಂಬೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News