×
Ad

ಕಾಶ್ಮೀರ ಸನ್ಸೆಟ್ ದಂಡಯಾತ್ರೆಗೆ ಸುಮಲತಾ ಆಯ್ಕೆ

Update: 2021-09-12 20:04 IST

ಉಡುಪಿ, ಸೆ.12: ಭಾರತೀಯ ಪರ್ವತಾರೋಹಣ ಪ್ರತಿಷ್ಠಾನ ನೇತೃತ್ವದಲ್ಲಿ ನಡೆಯಲಿರುವ ಕಾಶ್ಮೀರ ಸನ್ಸೆಟ್ ದಂಡಯಾತ್ರೆಗೆ ಆಯ್ಕೆಯಾದ ಸುಮಲತಾ ಬಜಗೋಳಿ ಇವರಿಗೆ ಗೆಳೆಯರ ಬಳಗ ನೆಲ್ಲಿಗುಡ್ಡೆ ವತಿಯಿಂದ ಆರ್ಥಿಕ ಸಹಾಯ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷ ಸುರೇಶ್ ಸಾಲಿಯನ್ ನೇತೃತ್ವದಲ್ಲಿ ಧನ ಸಹಾಯವನ್ನು ಸುಮಲತಾ ಅವರಿಗೆ ಹಸ್ತಾಂತರಿಸಲಾಯಿತು. ಭೀಮರತ್ನ ಪ್ರಶಸ್ತಿ ಪುರಸ್ಕೃತೆ ಸುಮಲತಾ ಅಜ್ಜರಕಾಡು ಡಾ.ಜಿ.ಶಂಕರ್ ಮಹಿಳಾ ಕಾಲೇಜಿನ ವಿದ್ಯಾರ್ಥಿ ನಾಯಕಿ ಹಾಗೂ ಆಳ್ವಾಸ್ ಕಾಲೇಜಿನಲ್ಲಿ ಪತ್ರಿಕೋದ್ಯಮದ ಹಳೆ ವಿಧ್ಯಾರ್ಥಿ ಆಗಿದ್ದಾರೆ. ಪ್ರಸ್ತುತ ಇವರು ಉಡುಪಿಯ ವಾರ್ತಾ ಇಲಾಖೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಜನರಲ್ ತಿಮ್ಮಯ್ಯ ರಾಷ್ಟ್ರೀಯ ಅಕಾಡೆಮಿ ವತಿಯಿಂದ ಮೂರನೇ ಬಾರಿ ಉಡುಪಿ ಮತ್ತು ದಕ್ಷಿಣ ಜಿಲ್ಲೆಯಿದ ಆಯ್ಕೆಯಾಗಿರವ ಏಕೈಕ ಅಭ್ಯರ್ಥಿ ಆಗಿರುವ ಸುಮಲತಾ, ಈ ಹಿಂದೆ ಒರಿಯೇಂಟೇಶನ್ ಮತ್ತು ಬೇಸಿಕ್ ಕ್ಯಾಂಪ್ ಪೂರೈಸಿದ್ದಾರೆ. ಇದೀಗ ಮೂರನೇ ಬಾರಿಗೆ ಸೆ.14ರಿಂದ 29ರವರೆಗೆ ಜಮ್ಮು ಕಾಶ್ಮೀರದ ಪಹಲ್ಛಮ್ನಲ್ಲಿ ನಡೆಯಲಿರುವ ಎಕ್ಸ್‌ಪೆಂಡಿಶನ್ ಕೋರ್ಸ್ ಕ್ಯಾಂಪ್‌ಗೆ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News