×
Ad

ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಆಹಾರ ಕಿಟ್ ವಿತರಣೆ

Update: 2021-09-12 20:28 IST

ಉಡುಪಿ, ಸೆ.12: ಯಕ್ಷಗಾನ ಕಲಾರಂಗದ ಆಯ್ದ 574 ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಗೀವ್ ಇಂಡಿಯಾ ಸಂಸ್ಥೆಯು ಕೊಡಮಾಡಿದ ತಲಾ 1000 ರೂ. ಮೌಲ್ಯದ ಆಹಾರದ ಕಿಟ್ ವಿತರಣಾ ಕಾರ್ಯಕ್ರಮ ಜರಗಿತು.

ಸೆ.11ರಂದು ಸಂಸ್ಥೆಯ ಕಛೇರಿಯಲ್ಲಿ ವಿದ್ಯಾಪೋಷಕ್ ದಾನಿಗಳಾದ ಎ. ಮುರಾರಿ ರಾವ್ ಹಾಗೂ ಚಂದ್ರಕಲಾ ರಾವ್ ದಂಪತಿ ಸಾಂಕೇತಿಕವಾಗಿ ಕಿಟ್ ವಿತರಿಸಿ ಶುಹಾರೈಸಿದರು. ಈ ಸಂದರ್ದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ವಿ. ಭಟ್, ಕೋಶಾಧಿಕಾರಿ ಪ್ರೊ.ಸದಾಶಿವ ರಾವ್, ಜತೆಕಾರ್ಯದರ್ಶಿ ಪ್ರೊ. ನಾರಾ ಯಣ ಎಂ.ಹೆಗಡೆ, ಎಚ್.ಎನ್.ಶೃಂಗೇಶ್ವರ, ಸಕ್ರಿಯ ಕಾರ್ಯಕರ್ತರಾದ ಎ. ನಟರಾಜ ಉಪಾಧ್ಯ, ದಿನೇಶ್ ಪೂಜಾರಿ, ಅಶೋಕ್ ಎಂ., ಮಂಜುನಾಥ ಉಪಸ್ಥಿತರಿದ್ದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.

ಸೆ.12ರಂದು ಗಣೇಶ್ ರಾವ್ ಎಲ್ಲೂರು ನೇತೃತ್ವದಲ್ಲಿ ಕಟಪಾಡಿ, ಪಡುಬಿದ್ರೆ, ಬೆಳ್ಮಣ್, ಕಾರ್ಕಳ, ಹೆಬ್ರಿ, ಪೆರ್ಡೂರು ಮಾರ್ಗವಾಗಿ, ಮಂಜುನಾಥ ಇವರ ನೇತೃತ್ವದಲ್ಲಿ ಚೇರ್ಕಾಡಿ, ಕೊಕ್ಕರ್ಣೆ, ಹಾಲಾಡಿ, ಸೈಬ್ರಕಟ್ಟೆ, ಬಾರ್ಕೂರು ಮಾರ್ಗ ವಾಗಿ ಹಾಗೂ ಅಶೋಕ್ ಎಂ. ಇವರ ನೇತೃತ್ವದಲ್ಲಿ ಬ್ರಹ್ಮಾವರ, ಸಾಲಿಗ್ರಾಮ, ಕೋಟೇಶ್ವರ, ಕುಂದಾಪುರ, ಹೆಮ್ಮಾಡಿ, ನಾವುಂದ, ಬೈಂದೂರು ಕೊಲ್ಲೂರು, ವಂಡ್ಸೆ ಮಾರ್ಗವಾಗಿ ಮೂರು ವಾಹನಗಳಲ್ಲಿ ಹೋಗಿ ಫಲಾನುಭವಿಗಳಿಗೆ ಕೆಟ್ ಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News