ಆದರ್ಶ್ ವಿದ್ಯಾ ಸಂಸ್ಥೆ ತೋಡಾರಿನಲ್ಲಿ ಫಾಳಿಲ ಕೋರ್ಸ್ ಉದ್ಘಾಟನೆ

Update: 2021-09-12 16:02 GMT

ತೋಡಾರು : ಸಮಸ್ತ ಅಂಗೀಕೃತ ಎರಡು ವರ್ಷಗಳ ಫಾಳಿಲ ಕೋರ್ಸ್ ಜೊತೆ ಆರ್ಟ್ಸ್, ಕಾಮರ್ಸ್ ಮತ್ತು ಸೈನ್ಸ್ ಪಿಯು ವಿದ್ಯಾಭ್ಯಾಸ ಹಾಗೂ ಧಾರ್ಮಿಕ ಅಧ್ಯಯನಕ್ಕಾಗಿ ತೋಡಾರಿನ ಆದರ್ಶ್ ವಿದ್ಯಾ ಸಂಸ್ಥೆಯಲ್ಲಿ ಪ್ರಾರಂಭಗೊಂಡ ಫಾಳಿಲ ಕೋರ್ಸಿಗೆ ದಾಖಲಾತಿ  ಪ್ರಾರಂಭಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಆಸಿಫ್ ಸುರಲ್ಪಾಡಿ ತಿಳಿಸಿದರು.

ಗುರುಪುರ ಮಸೀದಿಯ ಖತೀಬ್ ಜಮಾಲುದ್ದೀನ್ ದಾರಿಮಿ ದುಆ ನೆರವೇರಿಸಿದರು. ಬಯಲು ಪೇಟೆ ಖತೀಬ್ ಶರೀಫ್ ಅರ್ಶದಿ ಕಾರ್ಯಕ್ರಮ ಉದ್ಘಾಟಿಸಿದರು.

ಆದರ್ಶ್ ವಿದ್ಯಾ ಸಂಸ್ಥೆ ಸಮಸ್ತ ಕೇರಳ ಜಂಇಯತುಲ್ ಉಲಮಾದಿಂದ ಅಂಗೀಕೃತಗೊಂಡ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶರೀಯತ್ ವಿಮೆನ್ಸ್ ಕಾಲೇಜಾಗಿದ್ದು, ಗುಣ ಮಟ್ಟದ ಶಿಕ್ಷಣಕ್ಕೆ ಇಲ್ಲಿ ಆದ್ಯತೆ ನೀಡಲಾಗುತ್ತದೆ. ಪಿಯುಸಿಯೊಂದಿಗೆ ಫಾಳಿಲ ಮತ್ತು ಪಿಯುಸಿ ಅಲ್ಲದವರಿಗೆ ಶರಿಯತ್ ಕಲಿಸಿಕೊಡಲು ವಿಶೇಷವಾಗಿ ತರಬೇತುಗೊಂಡ ಅಧ್ಯಾಪಕಿಯರಿಂದ ಶಿಕ್ಷಣ ತರಬೇತಿಯನ್ನು ನೀಡಲಾಗುವುದೆಂದು ಸಂಸ್ಥೆಯ ಅಧ್ಯಕ್ಷರು ತಿಳಿಸಿದರು. 

ಮುಖ್ಯ ಅತಿಥಿಗಳಾಗಿ ಶಾಹುಲ್ ಹಮೀದ್ ಹಾಜಿ ಮೆಟ್ರೋ, ಎಮ್.ಎಚ್. ಮುಹಿಯುದ್ದೀನ್ ಹಾಜಿ ಅಡ್ಡೂರು, ಯು.ಪಿ.ಇಬ್ರಾಹಿಂ ಅಡ್ಡೂರು, ಅಬ್ದುಲ್ ಮಜೀದ್ ಸುರಲ್ಪಾಡಿ, ರಫೀಕ್ ಮಾಸ್ಟರ್ ಸಲೀಂ ಉಡುಪಿ, ವರದಿಗಾರರಾದ ಎಮ್.ಎಸ್ ಮೊಹಮ್ಮದ್ ಹಾಗು ಇತರರು  ಉಪಸ್ಥಿತರಿದ್ದರು. ಆಸಿಫ್ ಪಾರಂಪಳ್ಳಿ, ಏರ್ ಇಂಡಿಯಾ ಉಸ್ಮಾನ್ ಹಾಜಿ ಅನುಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.

ಹೆಚ್ಚಿನ ಮಾಹಿತಿಗಾಗಿ ಮೊ. 8277294732 / 9731569732  ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News