ಫೈನಾನ್ಸ್‌ಗೆ ನುಗ್ಗಿ ನಗದು ಕಳವು
Update: 2021-09-12 21:24 IST
ಮಲ್ಪೆ, ಸೆ.12: ಮಲ್ಪೆಯ ಕಾರ್ತಿಕ್ ಬಿಲ್ಡಿಂಗ್‌ನಲ್ಲಿರುವ ರಸ್ತು ಸೌಹಾರ್ದ ಕ್ರೆಡಿಟ್ ಕೋ ಆಪರೇಟಿವ್ ಹೆಸರಿನ ಪೈನಾನ್ಸ್ ಸಂಸ್ಥೆಯ ಕಚೇರಿಗೆ ಸೆ.11ರಂದು ರಾತ್ರಿ ವೇಳೆ ನುಗ್ಗಿ ನಗದು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಸಂಸ್ಥೆಯ ಶೇಟರ್‌ನ ಬೀಗವನ್ನು ಮುರಿದು ಒಳಗಡೆ ನುಗ್ಗಿ, ಕಚೇರಿಯ ಡ್ರಾವರ್ ಮತ್ತು ಕೆಲವು ವಸ್ತುಗಳನ್ನು ಜಾಲಾಡಿದ್ದು, ಡ್ರಾವರ್ ನಲ್ಲಿದ್ದ 720ರೂ. ನಗದು ಕಳವು ಮಾಡಿದ್ದಾರೆ. ಕಚೇರಿಯ ಸಿಸಿಟಿವಿಯನ್ನು ವಿಕ್ಷಿಸಿದಾಗ ರಾತ್ರಿ 12:30 ಗಂಟೆಗೆ ಕಚೇರಿಗೆ ನುಗ್ಗಿ ಕಳ್ಳತನ ಮಾಡಿ ಕೊಂಡು ಹೋಗಿರುವುದು ಕಂಡುಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.