ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಕೆಳಗಿಳಿದ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ

Update: 2021-09-13 06:18 GMT

ತಿರುವನಂತಪುರ: ಇಲ್ಲಿಂದ 170 ಪ್ರಯಾಣಿಕರೊಂದಿಗೆ ಯುಎಇಯ ಶಾರ್ಜಾಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸೋಮವಾರ ಬೆಳಗ್ಗೆ ತಾಂತ್ರಿಕ ದೋಷದಿಂದಾಗಿ ಟೇಕಾಫ್ ಆದ ಸ್ವಲ್ಪ ಹೊತ್ತಿನಲ್ಲೇ ಕೆಳಗೆ ಇಳಿಯಿತು ಎಂದು ಪಿಟಿಐ ವರದಿ ತಿಳಿಸಿದೆ.

ಆರು ಸಿಬ್ಬಂದಿಯನ್ನು ಹೊಂದಿದ್ದ ವಿಮಾನವು ತಿರುವನಂತಪುರ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು ಹಾಗೂ  ಐದು ಶಿಶುಗಳು ಸೇರಿದಂತೆ 170 ಪ್ರಯಾಣಿಕರಿಗೆ ಶಾರ್ಜಾಕ್ಕೆ ಪ್ರಯಾಣಿಸಲು ಮತ್ತೊಂದು ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ (ಎಐಇ) ವಕ್ತಾರರು ಪಿಟಿಐಗೆ ತಿಳಿಸಿದರು.

ವಿಮಾನ ನಿಲ್ದಾಣದ ಅಧಿಕಾರಿಯ ಪ್ರಕಾರ, ಈ ಘಟನೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಸಂಭವಿಸಿದೆ. ಟೇಕ್ ಆಫ್ ಆದ ಅರ್ಧ ಗಂಟೆಯ ನಂತರ ಪೈಲಟ್ ಗಳು ತಾಂತ್ರಿಕ ದೋಷವನ್ನು ಗಮನಿಸಿದರು ಹಾಗೂ  ತಕ್ಷಣವೇ ತಿರುವನಂತಪುರಕ್ಕೆ ಮರಳಲು ನಿರ್ಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News