ಉತ್ತರಪ್ರದೇಶ:ಆಸ್ಪತ್ರೆಗೆ ದಾಖಲಾಗಲು 3 ಗಂಟೆ ಕಾದು ಪ್ರಾಣಬಿಟ್ಟ 5 ವರ್ಷದ ಬಾಲಕಿ
Update: 2021-09-13 12:53 IST
ಲಕ್ನೊ: ಉತ್ತರ ಪ್ರದೇಶದಲ್ಲಿ ಆಸ್ಪತ್ರೆಯ ಆವರಣದಲ್ಲೇ, ಹೆತ್ತವರ ಎದುರಲ್ಲೇ ಐದು ವರ್ಷದ ಬಾಲಕಿ ಡೆಂಗ್ಯೂಯಿಂದ ಸಾವನ್ನಪ್ಪಿರುವ ದಾರುಣ ಘಟನೆ ವರದಿಯಾಗಿದೆ.
ಬಾಲಕಿಯ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲು ವ್ಯರ್ಥ ಪ್ರಯತ್ನ ಮಾಡಿದರು. ಆಸ್ಪತ್ರೆಗೆ ತಮ್ಮ ಮಗಳನ್ನು ದಾಖಲಿಸಲು 3 ಗಂಟೆ ಕಾಲ ಕಾದು ಸುಸ್ತಾದರು.
ಬಾಲಕಿಯನ್ನು ಬೆಳಿಗ್ಗೆ 8 ಗಂಟೆಗೆ ಫಿರೋಝಾಬಾದ್‌ನ ಆಸ್ಪತ್ರೆಗೆ ಕರೆತರಲಾಯಿತು. ಆದರೆ ಬಾಲಕಿಯ ಸ್ಥಿತಿ ಗಂಭೀರವಾಗಿದ್ದರೂ ಮಧ್ಯಾಹ್ನದ ವೇಳೆಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು NDTV ವರದಿ ಮಾಡಿದೆ.
ರಾಜ್ಯದ ರಾಜಧಾನಿ ಲಕ್ನೋದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿರುವ ಫಿರೋಝಾಬಾದ್ ನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದೆ. ಕಳೆದ 48 ಗಂಟೆಗಳಲ್ಲಿ ಜಿಲ್ಲೆಯಲ್ಲಿ 16 ಕ್ಕೂ ಹೆಚ್ಚು ಸಾವುಗಳು ವರದಿಯಾಗಿವೆ.