×
Ad

ಹೆಬ್ರಿ ಪಿಡಿಓ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವಜಾಕ್ಕೆ ವಿನಯ ಕುಮಾರ್ ಸೊರಕೆ ಆಗ್ರಹ

Update: 2021-09-13 19:44 IST

ಉಡುಪಿ, ಸೆ.13: ಪೆರ್ಡೂರು ಗ್ರಾಮದಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಸುಳ್ಳು ದಾಖಲೆ ಸೃಷ್ಟಿ ಅಕ್ರಮ ಕಟ್ಟಡ ನಿರ್ಮಾಣ ಮಾಡುತ್ತಿ ರುವ ಹೆಬ್ರಿ ಮತ್ತು ಮುದ್ರಾಡಿ ಗ್ರಾಪಂ ಪಿಡಿಓ ಸದಾಶಿವ ಸೇರ್ವೆಗಾರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ವಜಾಗೊಳಿಸಬೇಕು. ಸುಳ್ಳು ಆರೋಪ ಹೊರಿಸಿ ಕಾನೂನು ಬಾಹಿರವಾಗಿ ವರ್ಗಾವಣೆಗೊಳಿಸಿರುವ ಪೆರ್ಡೂರು ಪಿಡಿಒ ಸುಮನಾ ಅವರನ್ನು ಮರು ನೇಮಕ ಮಾಡಬೇಕು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆಗ್ರಹಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದಾಶಿವ ಸೇರ್ವೆಗಾರ್ ಪೆರ್ಡೂರು ಗ್ರಾಪಂನಿಂದ ಸರ್ವೆ ನಂಬರ್ 73/3 ರಲ್ಲಿ ಕಟ್ಟಡ ನಿರ್ಮಿಸಲು ಪರವಾನಿಗೆ ಪಡೆದುಕೊಂಡು, ಸರಕಾರಿ ಅರಣ್ಯ ಇಲಾಖೆಗೆ ಸೇರಿದ ಜಮೀನಿನ ಸರ್ವೆ ನಂಬರ್ 296ರಲ್ಲಿ ಮನೆ ನಿರ್ಮಿಸುತ್ತಿ ದ್ದಾರೆ. ಅಕ್ರಮ ಕಟ್ಟಡಕ್ಕೆ ಅವರದೇ ಹೆಸರಿನ ದಾಖಲೆ ಸಲ್ಲಿಸಿ ತಾತ್ಕಾಲಿಕ ವಿದ್ಯುತ್ ಸಂಪರ್ಕವನ್ನು ಪಡೆದು ಬಿಲ್ ಪಾವತಿ ಮಾಡಿದ್ದಾರೆ. ಈ ಬಗ್ಗೆ ತನಿಖೆ ನಡೆಸುವ ಕುರಿತು ಸಾಮಾನ್ಯ ಸಭೆಯಲ್ಲಿ ಪೆರ್ಡೂರು ಪಿಡಿಒ ಸುಮನಾ ನಿರ್ಣಯ ಮಂಡಿಸಿ, ಸದಾಶಿವ ಅವರಿಗೆ ನೋಟಿಸು ಜಾರಿಗೊಳಿಸಿದ್ದಾರೆ ಎಂದರು.

ದೂರು ಅರ್ಜಿ ಪರಿಶೀಲನೆ ವೇಳೆ ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ, ಸದಸ್ಯರಾದ ತುಕಾರಾಮ ನಾಯಕ್, ಜಗದೀಶ್ ಶೆಟ್ಟಿ, ಸಚಿನ್ ಪೂಜಾರಿ, ಪಿಡಿಒ ಸುಮನಾ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಅಲ್ಲದೆ ಸದಾಶಿವ ಸೇರ್ವೆಗಾರ್ ವಿರುದ್ಧದ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸ ದಂತೆ ಬೆದರಿಕೆ ಹಾಕಿ ಅವಾಚ್ಯ ಶಬ್ದದಿಂದ ನಿಂದಿಸಿ, ರಾಜಕೀಯ ಬಲದಿಂದ ಪಿಡಿಒ ಅವರನ್ನು ವರ್ಗಾವಣೆ ಮಾಡಿದ್ದಾರೆ. ಈಗಾಗಲೇ ತಹಶೀಲ್ದಾರ್ ತನಿಖೆ ನಡೆಸಿ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಸದಾಶಿವ ಸೇರ್ವೆಗಾರ್ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿರುವುದು ಸಾಬೀತಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೆರ್ಡೂರು ಗ್ರಾಪಂ ಅಧ್ಯಕ್ಷ ದೇವು ಪೂಜಾರಿ, ಸದಸ್ಯರಾದ ತುಕಾರಾಮ್ ನಾಯಕ್, ಜಗದೀಶ್ ಶೆಟ್ಟಿ, ಸಚಿನ್ ಪೂಜಾರಿ ವಿರುದ್ಧ ಈಗಾಗಲೇ ಹಿರಿಯಡ್ಕ ಠಾಣೆಯಲ್ಲಿ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ಆರೋಪಿಗಳನ್ನು ಈವರೆಗೆ ಬಂಧಿಸಿಲ್ಲ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಪೆರ್ಡೂರು ಗ್ರಾಪಂ ಉಪಾಧ್ಯಕ್ಷೆ ಚೇತನಾ ಶೆಟ್ಟಿ, ಸದಸ್ಯ ರಾದ ಸಂತೋಷ್ ಕುಲಾಲ್, ಉದಯ ಕುಲಾಲ್, ರಮೇಶ್ ಪೂಜಾರಿ, ದಿನೇಶ್ ಪೂಜಾರಿ, ಸತೀಶ್ ನಾಯ್ಕಿ, ಕಾಂಗ್ರೆಸ್‌ನ ಮುಖಂಡ ಹರೀಶ್ ಕಿಣಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News