ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿ ಇಲ್ಲ: ವಿನಯ ಕುಮಾರ್ ಸೊರಕೆ ಆರೋಪ
Update: 2021-09-13 19:46 IST
ಉಡುಪಿ, ಸೆ.13: ಕಾರ್ಕಳ ಪ್ರಾರ್ಥನಾ ಮಂದಿರದ ಮೇಲೆ ನಡೆಸಿರುವ ದಾಳಿಯು ರಾಜ್ಯದಲ್ಲಿ ಸರಕಾರ ಹಾಗೂ ಕಾನೂನು ಸುವ್ಯವಸ್ಥೆ ಸರಿಯಿಲ್ಲ ಎಂಬುದಕ್ಕೆ ಜೀವಂತ ನಿದರ್ಶನವಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಟೀಕಿಸಿದ್ದಾರೆ.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮತಾಂತರ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಜಾಗರಣಾ ವೇದಿಕೆ ಕಾರ್ಯ ಕರ್ತರು ಪ್ರಾರ್ಥನಾಲಯಕ್ಕೆ ದಾಳಿ ನಡೆಸಿರುವುದು ಖಂಡನೀಯ. ಇಲ್ಲಿ ಬಲ ವಂತದ ಮತಾಂತರ ನಡೆಯುತ್ತಿದ್ದರೆ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳ ಬೇಕಾಗಿತ್ತು. ರಾಜ್ಯದಲ್ಲಿ ಅವರದ್ದೇ ಸರಕಾರ ಇದೆ. ಉಸ್ತುವಾರಿ ಸಚಿವರು ಕೂಡ ಕಾರ್ಕಳದವರೇ ಆಗಿದ್ದಾರೆ. ಆದರೂ ಈ ರೀತಿಯಲ್ಲಿ ಏಕಾಏಕಿ ದಾಳಿ ಮಾಡಿ ರುವುದು ಸರಿಯಲ್ಲ ಎಂದರು.