75 ಕೋಟಿಗೂ ಅಧಿಕ ಕೋವಿಡ್ ಲಸಿಕೆ ಡೋಸ್ ವಿತರಣೆ: ಕೇಂದ್ರ ಸರಕಾರ
Update: 2021-09-13 19:55 IST
ಹೊಸದಿಲ್ಲಿ: ಈ ವರ್ಷ ಜನವರಿಯಲ್ಲಿ ರಾಷ್ಟ್ರವ್ಯಾಪಿ ಅಭಿಯಾನ ಆರಂಭಿಸಿದಾಗಿನಿಂದ ಭಾರತವು 75 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‌ಗಳನ್ನು ವಿತರಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿದರು.
75 ಕೋಟಿ ಡೋಸ್‌ಗಳ "ಮೈಲಿಗಲ್ಲು" ಅನ್ನು ಇಂದು ಉಲ್ಲೇಖಿಸಿದ ಮಾಂಡವಿಯಾ, ಇದನ್ನು ಭಾರತದ 75 ನೇ ಸ್ವಾತಂತ್ರ್ಯೋತ್ಸವದ ಆಚರಣೆಯೊಂದಿಗೆ ಜೋಡಿಸಲು ಪ್ರಯತ್ನಿಸಿದರು.
"ಭಾರತಕ್ಕೆ ಅಭಿನಂದನೆಗಳು! ಪ್ರಧಾನಿ ನರೇಂದ್ರ ಮೋದಿಯವರ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಮಂತ್ರದೊಂದಿಗೆ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವು ಹೊಸ ಆಯಾಮಗಳನ್ನು ಸೃಷ್ಟಿಸುತ್ತಿದೆ. #AzadiKaAmritMahotsav, ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ದೇಶವು 75 ಕೋಟಿ ಡೋಸ್ ಲಸಿಕೆಯನ್ನು ದಾಟಿದೆ" ಎಂದು ಮಾಂಡವೀಯ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.