ಮಳಯಾಳಂ ಚಿತ್ರರಂಗದ ಖ್ಯಾತ ನಟ ರಿಝಾಬಾವಾ ನಿಧನ

Update: 2021-09-13 14:29 GMT
Photo: Indianexpress

ಕೊಚ್ಚಿ: ೯೦ರ ದಶಕಗಳಲ್ಲಿ ಮಳಯಾಳಂ ಚಿತ್ರರಂಗದಲ್ಲಿ ವಿಲನ್‌ ಪಾತ್ರಗಳಲ್ಲಿ ಮಿಂಚಿದ್ದ, ಜಾನ್‌ ಹೊನಾಯ್‌ ಖ್ಯಾತಿಯ ರಿಝಾಭಾವಾರವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ತಮ್ಮ ೫೫ನೇ ವಯಸ್ಸಿನಲ್ಲಿ ಅವರು ಕೊಚ್ಚಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.

ಖ್ಯಾತ ನಟನ ನಿಧನಕ್ಕೆ ಮಳಯಾಳಂ ಚಿತ್ರರಂಗದ ಖ್ಯಾತನಾಮರಾದ ದುಲ್ಖರ್‌ ಸಲ್ಮಾನ್‌, ಪೃಥ್ವಿರಾಜ್‌ ಸುಕುಮಾರನ್‌ ಸೇರಿದಂತೆ ಹಲವು ಮಂದಿ ಸಂತಾಪ ವ್ಯಕ್ತಪಡಿಸಿದ್ದಾರೆ. 

ರಿಝಾಬಾವಾರವರು ಕಿಡ್ನಿ ಸಂಬಂಧಿತ ಕಾಯಿಲೆಯ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದರು. ವರ್ಷಗಳಿಂದ ಅವರು ಚಿತ್ರರಂಗದಿಂದ ಅಂತರ ಕಾಯ್ದುಕೊಂಡಿದ್ದರು. ನಾಟಕಗಳ ಮೂಲಕ ತಮ್ಮ ವೃತ್ತಿಜೀವನವನ್ನು ಆರಂಭಿಸಿದ್ದ ಅವರು ೧೯೮೪ರಲ್ಲಿ ವಿಶುಪಕ್ಷಿ ಎಂಬ ಚಿತ್ರದಲ್ಲಿ ನಟಿಸಿದರು. ಆದರೆ ಆ ಚಿತ್ರ ಬಿಡುಗಡೆಯಾಗಿರಲಿಲ್ಲ. ಆರು ವರ್ಷಗಳ ನಂತರ ಶಾಜಿ ಕೈಲಾಸ್‌ ನಿರ್ದೇಶನದ ಡಾ. ಪಶುಪತಿ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು. ಅದೇ ವರ್ಷ ಇನ್‌ ಹರಿಹರ್‌ ನಗರ್‌ ಚಿತ್ರದಲ್ಲಿನ ವಿಲನ್‌ ಪಾತ್ರವಾದ ʼಜಾನ್‌ ಹೊನಾಯ್ʼ ಅವರಿಗೆ ಭಾರೀ ಖ್ಯಾತಿಯನ್ನು ತಂದಿತ್ತು. ಇಂದಿಗೂ ಈ ಪಾತ್ರದ ಮೂಲಕವೇ ಅವರು ಪ್ರಸಿದ್ಧರಾಗಿದ್ದಾರೆ.

Full View Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News