ಸೆ.15: ಸಿಟಿಗೋಲ್ಡ್‌ನಲ್ಲಿ ಮೆಹರ್ ವೆಡ್ಡಿಂಗ್ ಕಲೆಕ್ಷನ್; ಕಸ್ಟಮೈಸ್ಡ್ ಕಲೆಕ್ಷನ್ ಪ್ರದರ್ಶನ
ಮಂಗಳೂರು, ಸೆ.13: ಪ್ರತಿಷ್ಠಿತ ಆಭರಣ ಸಂಸ್ಥೆಯಾಗಿ ಗುರುತಿಸಿಕೊಂಡಿರುವ ಸಿಟಿ ಗೋಲ್ಡ್‌ನಲ್ಲಿ ಮೆಹರ್ ವೆಡ್ಡಿಂಗ್ ಕಲೆಕ್ಷನ್ ಪ್ರಯುಕ್ತ ಕಸ್ಟಮೈಸ್ಡ್ ಕಲೆಕ್ಷನ್ ಪ್ರದರ್ಶನವು ನಗರದ ಬೈಪಾಸ್ ರಸ್ತೆಯಲ್ಲಿನ ಸಿಟಿ ಗೋಲ್ಡ್ ಮಳಿಗೆಯಲ್ಲಿ ಸೆ.15ರಂದು ಸಂಜೆ 4:30ಕ್ಕೆ ಚಾಲನೆಗೊಳ್ಳಲಿದೆ. ಈ ಪ್ರದರ್ಶನವು ಅ.31ರವರೆಗೆ ನಡೆಯಲಿದೆ.
ಮೆಹರ್ ಮಲ್ಹರ್ ಕಲೆಕ್ಷನನ್ನು ಉದ್ಯಮಿ ಹಾಗೂ ಹಿದಾಯ ಫೌಂಡೇಷನ್‌ನ ಟ್ರಸ್ಟಿ ಝಿಯಾವುದ್ದೀನ್ ಅಹ್ಮದ್ ಉದ್ಘಾಟಿಸಲಿದ್ದಾರೆ. ಮೆಹರ್ ವಿಂಟೇಜ್ ಕಲೆಕ್ಷನನ್ನು ಇಂಟೆಕ್ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ ಉದ್ಘಾಟಿಸಲಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಅಬ್ದುಲ್ ಲತೀಫ್ ಕಂದಕ್, ಇಂಟೆಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪುನೀತ್ ಶೆಟ್ಟಿ, ಮುನ್ನೂರು ವಲಯ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮುನ್ನೂರು ಗ್ರಾಪಂ ಸದಸ್ಯ ಅಝೀಝ್ ಆರ್.ಕೆ.ಸಿ. ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ.
ಮೆಹರ್ ವೆಡ್ಡಿಂಗ್ ಕಲೆಕ್ಷನ್ ಪ್ರಯುಕ್ತ ಮೆಹರ್ ವೆಡ್ಡಿಂಗ್ ಖರೀದಿಯ ಮೇಲೆ ವಿಶೇಷ ರಿಯಾಯಿತಿ ನೀಡಲಾಗುವುದು. ಗ್ರಾಹಕರ ಬಜೆಟ್ ಅನುಸಾರವಾಗಿ ಆಭರಣಗಳನ್ನು ನೀಡಲಾಗುವುದು. ಟ್ರೆಡಿಶನಲ್, ಆಂಟಿಕ್, ಕಲ್ಕತ್ತಾ ವಿಂಟೇಜ್ ಆಭರಣಗಳನ್ನು ಪ್ರದರ್ಶಿಸಲಾಗುವುದು. ಈ ಪ್ರದರ್ಶನದ ಪ್ರಯುಕ್ತ ಮೇಕಿಂಗ್ ಚಾರ್ಜ್‌ನ ಮೇಲೆ ಕಡಿತ ನೀಡಲಾಗುವುದೆಂದು ಸಿಟಿ ಗೋಲ್ಡ್ ಸಂಸ್ಥೆಯ ಪ್ರಕಟನೆ ತಿಳಿಸಿದೆ.