×
Ad

ದ.ಕ. ಜಿಲ್ಲೆ: ಇಮಾಮ್/ಮೌಝಿನ್‌ರ ಗಮನಕ್ಕೆ

Update: 2021-09-13 22:02 IST

ಮಂಗಳೂರು, ಸೆ.13: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಲ್ಲಿ ನೋಂದಣಿಗೊಂಡ ದ.ಕ. ಜಿಲ್ಲೆಯ ಮಸೀದಿಗಳ ಪೇಶ್‌ ಇಮಾಮ್ ಮತ್ತು ಮೌಝಿನ್‌ಗಳ ಪೈಕಿ ಕೋವಿಡ್ ಪ್ಯಾಕೇಜ್‌ಗೆ ಅರ್ಜಿ ಸಲ್ಲಿಸಿದವರ ಬ್ಯಾಂಕ್‌ ಖಾತೆಗೆ 3000 ರೂ. ಜಮೆ ಆಗಿದೆ.

ಹೆಚ್ಚಿನವರು ಅರ್ಜಿ ಸಲ್ಲಿಸುವಾಗ ಬೇರೆ ಬ್ಯಾಂಕ್‌ನ ಖಾತೆಸಂಖ್ಯೆಯನ್ನು ಜಿಲ್ಲಾ ವಕ್ಫ್ ಕಚೇರಿಗೆ ಸಲ್ಲಿಸಿದ್ದಾರೆ. ಆದರೆ ಈ ಮೊದಲೇ ಆಧಾರ್ ಕಾರ್ಡ್‌ನೊಂದಿಗೆ ಬ್ಯಾಂಕ್ ಖಾತೆಗೆ ಲಿಂಕ್ ಆದ ಬ್ಯಾಂಕ್ ಖಾತೆಗೆ ಈ ಪ್ಯಾಕೇಜ್‌ನ 3000 ರೂ.ವರ್ಗಾವಣೆ ಆದ ಕಾರಣ ಅಂತಹಾ ಪೇಶ್ ಇಮಾಮ್ ಮತ್ತು ಮೌಝಿನ್‌ರು ತಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆದ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಜಿಲ್ಲಾ ವಕ್ಫ್ ಕಚೇರಿಗೆ ಆಗಮಿಸಿ ಕಂಪ್ಯೂಟರ್‌ನಲ್ಲಿ ಪರಿಶೀಲಿಸಿ ಸರಿಪಡಿಸಿಕೊಳ್ಳಬೇಕು. ಸರಿಪಡಿಸಿದ ಪೇಶ್ ಇಮಾಮ್ ಮತ್ತು ಮೌಝನ್‌ರಿಗೆ ಮಾತ್ರ ಜೂನ್, ಜುಲೈ, ಆಗಸ್ಟ್ ತಿಂಗಳ ಗೌರವ ಧನ ಬಿಡುಗಡೆ ಆಗಬಹುದು. ಹಾಗಾಗಿ ತಿಂಗಳ ಗೌರವಧನ ಪಡೆಯುತ್ತಿರುವ ಮಸೀದಿಯ ಎಲ್ಲಾ ಪೇಶ್ ಇಮಾಮ್ ಮತ್ತು ಮೌಝಿನ್‌ರು ಮೂರು ದಿನದೊಳಗೆ ಕಡ್ಡಾಯವಾಗಿ ಇದನ್ನು ಸರಿಪಡಿಸಿ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ವಕ್ಫ್ ಇಲಾಖಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News