ಬ್ಯಾರಿ ಭಾಷಣ ಸ್ಪರ್ಧೆಗೆ ಆಹ್ವಾನ
Update: 2021-09-13 22:11 IST
ಮಂಗಳೂರು, ಸೆ.13: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಅ.3ರಂದು ಅಪರಾಹ್ನ 2ಗಂಟೆಗೆ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವನ್ನು ನಗರದ ವೆಲೆನ್ಸಿಯಾ ಸರ್ಕಲ್ ಬಳಿಯ ಸೌಂಡ್‌ವೇವ್ ಸ್ಟುಡಿಯೋದಲ್ಲಿ ಹಮ್ಮಿಕೊಳ್ಳಲಾಗಿದೆ.
ಬ್ಯಾರಿ ಭಾಷಾ ದಿನಾಚರಣೆ ಅಂಗವಾಗಿ ಅಪರಾಹ್ನ 2:30ಕ್ಕೆ ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಂತೆ ಬ್ಯಾರಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ, ವಿಜೇತರಿಗೆ ಪ್ರಥಮ 3,000 ರೂ, ದ್ವಿತೀಯ 2,000 ರೂ, ತೃತೀಯ 1,000 ರೂ, ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.
ಆಸಕ್ತರು ಸೆ.23ರೊಳಗೆ ತಮ್ಮ ಹೆಸರನ್ನು ಅಕಾಡಮಿ ಮೊ.ಸಂ: 7483946578ಕ್ಕೆ ಕರೆ ಅಥವಾ ವಾಟ್ಸಾಪ್ ಮಾಡಿ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು ಎಂದು ರಿಜಿಸ್ಟ್ರಾರ್ ಪೂರ್ಣಿಮಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.