ಉ.ಕೊರಿಯಾ: ದೀರ್ಘವ್ಯಾಪ್ತಿ ಕ್ಷಿಪಣಿ ಪರೀಕ್ಷೆ ಯಶಸ್ವಿ‌

Update: 2021-09-13 17:45 GMT
photo: twitter.com/JosephHDempsey

ಪ್ರೋಂಗ್ಯಾಂಗ್, ಸೆ.12: ನೂತನ ಶ್ರೇಣಿಯ ದೀರ್ಘವ್ಯಾಪ್ತಿ ಕ್ಷಮತೆಯ ಕ್ರೂಸ್ ಕ್ಷಿಪಣಿಗಳ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ ಎಂದು ಉತ್ತರ ಕೊರಿಯಾ ಹೇಳಿದೆ.

2 ವರ್ಷದಿಂದ ಅಭಿವೃದ್ಧಿ ಹಂತದಲ್ಲಿದ್ದ ಕ್ರೂಸ್ ಕ್ಷಿಪಣಿ(ಕೆಳಮಟ್ಟದಲ್ಲಿ ಚಲಿಸುವ, ಕಾರ್ಯತಂತ್ರ ಮಾರ್ಗದರ್ಶಿ ಕ್ಷಿಪಣಿ) 1,500 ಕಿ.ಮೀ ದೂರದ ಉದ್ದೇಶಿತ ಗುರಿಯನ್ನು ಯಶಸ್ವಿಯಾಗಿ ತಲುಪಿದೆ ಎಂದು ಉತ್ತರ ಕೊರಿಯಾದ ಸೆಂಟ್ರಲ್ ನ್ಯೂಸ್ ಏಜೆನ್ಸಿ ಸೋಮವಾರ ಹೇಳಿದೆ.

ದೇಶವನ್ನು ಸಶಕ್ತ ಸೇನಾ ಬಲವನ್ನಾಗಿಸುವ ಅಧ್ಯಕ್ಷ ಕಿಮ್ ಜೋಂಗ್ ಯೂನ್ ಅವರ ಪರಿಕಲ್ಪನೆಗೆ ಪೂರಕವಾಗಿ ಈ ನೂತನ ಕ್ಷಿಪಣಿಗಳು ಕಾರ್ಯನಿರ್ವಹಿಸಲಿದೆ ಎಂದು ಉತ್ತರಕೊರಿಯಾದ ರಕ್ಷಣಾ ಇಲಾಖೆ ಹೇಳಿದೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News