×
Ad

28 ವರ್ಷದ ಭಾರತೀಯ ಶೂಟರ್‌ ನಮನ್ವೀರ್‌ ಬ್ರಾರ್ ಆತ್ಮಹತ್ಯೆ

Update: 2021-09-14 13:51 IST
Photo: Thetribune

ಮೊಹಾಲಿ: ಭಾರತದ ಶೂಟರ್ ನಮನ್ವೀರ್ ಸಿಂಗ್ ಬ್ರಾರ್ (28) ಸೋಮವಾರ ಬೆಳಿಗ್ಗೆ ಇಲ್ಲಿನ ಸೆಕ್ಟರ್ 71 ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು thetribune ವರದಿ ಮಾಡಿದೆ.

ಟ್ರ್ಯಾಪ್ ಶೂಟರ್ ಬ್ರಾರ್ ಈ ವರ್ಷದ ಮಾರ್ಚ್ ನಲ್ಲಿ ನಡೆದ ದೆಹಲಿ ಶೂಟಿಂಗ್ ವಿಶ್ವಕಪ್ ನ ಕನಿಷ್ಠ ಅರ್ಹತಾ ಸ್ಕೋರ್ (MQS) ವಿಭಾಗದಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದರು.

2015 ರಲ್ಲಿ, ಅವರು ದಕ್ಷಿಣ ಕೊರಿಯಾದ ಗ್ವಾಂಗ್ಜುವಿನಲ್ಲಿ ನಡೆದ ವಿಶ್ವ ವಿಶ್ವವಿದ್ಯಾಲಯ ಕ್ರೀಡಾಕೂಟದ ಡಬಲ್-ಟ್ರ್ಯಾಪ್ ಶೂಟಿಂಗ್ ಸ್ಪರ್ಧೆಯಲ್ಲಿ ಕಂಚು ಪಡೆದಿದ್ದರು.

ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News