ಜಾದೂಗಾರ ಕುದ್ರೋಳಿ ಗಣೇಶ್ ಗೆ 'ಕಮಲ ಪತ್ರ' ಪ್ರಶಸ್ತಿ
ಮಂಗಳೂರು: ಅಂತರ್ ರಾಷ್ಟ್ರೀಯ ಸೇವಾ ಸಂಸ್ಥೆಯಾದ ಜೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ (ಜೆಸಿಐ) ವತಿಯಿಂದ ನೀಡಲಾಗುವ ಪ್ರತಿಷ್ಠಿತ “ಕಮಲ ಪತ್ರ “ ಪ್ರಶಸ್ತಿಯನ್ನು ಜಾದೂಗಾರ ಕುದ್ರೋಳಿ ಗಣೇಶ್ ಇವರಿಗೆ ಪ್ರದಾನ ಮಾಡಲಾಯಿತು.
ಭಾರತದ ಜಾದೂ ಕ್ಷೇತ್ರಕ್ಕೆ ಅಂತರ್ ರಾಷ್ಟ್ರೀಯ ಮನ್ನಣೆ ನೀಡುವಲ್ಲಿ ಶ್ರಮಿಸಿದ ಸಾಧನೆಯನ್ನು ಗಮನಿಸಿ ಜೆಸಿಐ ಲಾಲ್ ಭಾಗ ಘಟಕವು ಕುದ್ರೋಳಿ ಗಣೇಶ್ ಇವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿತ್ತು.
ಮಂಗಳೂರಿನ ಕದ್ರಿಯ ಲಯನ್ಸ್ ಅಶೋಕಾ ಸೇವಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಜೆಸಿಐ ಸೆನೆಟರ್ ಸೌಜನ್ಯ ಹೆಗ್ಡೆ ಇವರು ಪ್ರಶಸ್ತಿ ಪ್ರದಾನ ಮಾಡಿದರು. ಜಾದೂ ಕಲೆಯನ್ನು ಪ್ರೇಕ್ಷಕರ ಮನಸ್ಸಿಗೆ ಮುಟ್ಟಿಸುವಲ್ಲಿ ಕಳೆದ 30 ವರ್ಷಗಳಿಂದ ಕುದ್ರೋಳಿ ಗಣೇಶ್ ರವರು ಮಾಡುತ್ತಿರುವ ಅವಿರತ ಪ್ರಯತ್ನ ಅಭಿನಂದನಾರ್ಹ ಎಂದು ಅವರು ಹೇಳಿದರು.
ವಲಯ ಉಪಾಧ್ಯಕ್ಷರಾದ ದರ್ಶಿತ್ ಆರ್ ಶೆಟ್ಟಿ , ಜೆಸಿಐ ಲಾಲ್ ಬಾಗ್ ಘಟಕದ ಅಧ್ಯಕ್ಷರಾದ ಪ್ರಶಾಂತ್ ಬಿ ಶೆಟ್ಟಿ, ಘಟಕದ ಸ್ಥಾಪಕ ಅಧ್ಯಕ್ಷ ರಾದ ಪೀಟರ್ ಆಂಟನಿ ಪಿಂಟೋ, ನಿಕಟಪೂರ್ವ ಅಧ್ಯಕ್ಷರಾದ ಪ್ರಿನ್ಸ ಪಿಂಟೋ, ಮುಂದಿನ ಸಾಲಿನ ಅಧ್ಯಕ್ಷರಾದ ಪ್ರವೀಣ್ ಉಡುಪ ಮುಂತಾದವರು ಉಪಸ್ಥಿತರಿದ್ದರು.