ಸಿಪಿಎಂ ಮಂಗಳೂರು ನಗರ ದಕ್ಷಿಣ ಸಮ್ಮೇಳನಕ್ಕೆ ಸ್ವಾಗತ ಸಮಿತಿ ರಚನೆ
ಮಂಗಳೂರು, ಸೆ.14: ಸಿಪಿಎಂ ಪಕ್ಷದ 23ನೇ ಮಹಾಧಿವೇಶನವು 2022ರ ಎಪ್ರಿಲ್‌ನಲ್ಲಿ ಕೇರಳದ ಕಣ್ಣೂರಿನಲ್ಲಿ ಜರುಗಲಿದ್ದು, ಎಲ್ಲಾ ರಾಜ್ಯ, ಜಿಲ್ಲೆ, ತಾಲೂಕು, ಮಧ್ಯವರ್ತಿ ಸಮಿತಿ ಹಾಗೂ ಶಾಖೆಗಳ ಸಮ್ಮೇಳನದ ಪ್ರಕ್ರಿಯೆ ಪ್ರಾರಂಭಗೊಂಡಿದ್ದು, ಮಂಗಳೂರು ನಗರ ದಕ್ಷಿಣ ಸಮ್ಮೇಳನವು ನ.7ರಂದು ಬಜಾಲ್ ಪಕ್ಕಲಡ್ಕದಲ್ಲಿ ಜರುಗಲಿದೆ. ಅದರ ಯಶಸ್ವಿಗಾಗಿ ಸ್ವಾಗತ ಸಮಿತಿ ರಚನಾ ಸಭೆಯು ಪಕ್ಕಲಡ್ಕ ಯುವಕ ಮಂಡಲದಲ್ಲಿ ನಡೆಯಿತು.
ಸಿಪಿಎಂ ಮಂಗಳೂರು ನಗರ ದಕ್ಷಿಣ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ.ಬಾಲಕೃಷ್ಣ ಶೆಟ್ಟಿ ಮಾತನಾಡಿದರು.
ಜಿಲ್ಲಾ ಯುವ ನಾಯಕ ಸಂತೋಷ್ ಬಜಾಲ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ 100 ಮಂದಿ ಕಾರ್ಯಕರ್ತರು, ಮತ್ತು ಹಿತೈಷಿಗಳನ್ನು ಒಳಗೊಂಡ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಕಾರ್ಯಾದ್ಯಕ್ಷರಾಗಿ ಸಂತೋಷ್ ಬಜಾಲ್, ಅಧ್ಯಕ್ಷರಾಗಿ ಸುರೇಶ್ ಬಜಾಲ್, ಪ್ರಧಾನ ಕಾರ್ಯದರ್ಶಿಯಾಗಿ ದೀಪಕ್ ಬಜಾಲ್, ಖಜಾಂಚಿಯಾಗಿ ವರಪ್ರಸಾದ್, ಸಂಘಟನಾ ಕಾರ್ಯದರ್ಶಿಗಳಾಗಿ ಉದಯ ಕುಂಟಲಗುಡ್ಡೆ, ಬಶೀರ್ ಜಲ್ಲಿಗುಡ್ಡ, ರೋಹಿಣಿ ಜೆ.ಲೀಲಾ ಅವರನ್ನು ಆರಿಸಲಾಯಿತು.
ಪಕ್ಷದ ನಾಯಕರಾದ ಜಯಂತಿ ಶೆಟ್ಟಿ, ಯೋಗೀಶ್ ಜಪ್ಪಿನಮೊಗರು, ನಗರ ಮುಖಂಡರಾದ ದಿನೇಶ್ ಶೆಟ್ಟಿ, ಸುರೇಶ್ ಬಜಾಲ್, ಬಶೀರ್ ಜಲ್ಲಿಗುಡ್ಡ, ಜೆ.ಲೀಲಾ, ಕೇಶವ ಭಂಡಾರಿ, ಅಶೋಕ್ ಸಾಲ್ಯಾನ್, ಹರಿಶ್ಚಂದ್ರ, ಕಮಲಾಕ್ಷ ಶೆಟ್ಟಿ, ಮೋಹನ್ ಜಲ್ಲಿಗುಡ್ಡ, ಜಗದೀಶ್, ನಾಗರಾಜ್, ನೂರುದ್ದೀನ್ ಉಪಸ್ಥಿತರಿದ್ದರು.