ವಿಶ್ವಾಸ್ ವೀನಸ್ ಗೆಳೆಯರ ಬಳಗದ ವತಿಯಿಂದ ಶೈಕ್ಷಣಿಕ ಕಾರ್ಯಾಗಾರ
Update: 2021-09-14 16:15 IST
ಮಂಗಳೂರು : ಜೆಪ್ಪು ಪ್ರದೇಶದ ವಿಶ್ವಾಸ್ ವೀನಸ್ ಗೆಳೆಯರ ಬಳಗದ ವತಿಯಿಂದ ವಿಶ್ವಾಸ್ ವೀನಸ್ ಅಪಾರ್ಟ್ಮೆಂಟ್ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ವಿದ್ಯಾರ್ಜನೆಯ ಬಗ್ಗೆ ಯಾವ ರೀತಿಯಲ್ಲಿ ತಯಾರಿ ನಡೆಸಬೇಕು ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರ ನಡೆಯಿತು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ವಾಗ್ಮಿ, ನಿರೂಪಕ, ಶಿಕ್ಷಕ ಮತ್ತು ವಿದ್ಯಾರ್ಥಿಗಳಿಗಾಗಿ ಇಂತಹ ಸಾವಿರಾರು ಕಾರ್ಯಕ್ರಮಗಳನ್ನು ಸಂಘಟಿಸಿದ ರಫೀಕ್ ಮಾಸ್ಟರ್ ಅವರು ಪ್ರೈಮರಿ, ಹೈ ಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಕೌನ್ಸಿಲ್ಲಿಂಗ್, ಕೆರಿಯರ್ ಗೈಡೆನ್ಸ್ ನಡೆಸಿ ಕೊಟ್ಟರು, ನಂತರ ಮಾಸ್ಟರ್ ಫ್ಲವರ್ ನ ಪಕೀರಬ್ಬ ಹಾಗೂ ಗೆಳಯರ ಬಳಗದ ಎಲ್ಲ ಸದಸ್ಯರು ಜೊತೆಗೂಡಿ ರಫೀಕ್ ಮಾಸ್ಟರ್ ರವರನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಗೆಳೆಯರ ಬಳಗದ ಶಶಿಕಾಂತ್ ಸ್ವಾಗತಿಸಿದರು. ಸಮೀರ್ ಪಾಂಡೇಶ್ವರ ಕಾರ್ಯಕ್ರಮ ನಿರೂಪಿಸಿದರು.