×
Ad

​ಬ್ರಹ್ಮಾವರ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತ ಕಾರ್ಯಾಗಾರ

Update: 2021-09-14 21:49 IST

ಉಡುಪಿ, ಸೆ.14: ಬ್ರಹ್ಮಾವರ ಕ್ರಾಸ್‌ಲ್ಯಾಂಡ್ ಪದವಿ ಕಾಲೇಜಿನಲ್ಲಿ ಐಕ್ಯೂಎಸಿ ಆಶ್ರಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾದ ಕಾರ್ಯಾಗಾರ ಮಂಗಳವಾರ ನಡೆಯಿತು.

ಬಿ.ಎ ಮತ್ತು ಬಿ.ಕಾಂ ಪ್ರಥಮ ಪದವಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಗಾಗಿ ನಡೆಸಲಾದ ಈ ಕಾರ್ಯಗಾರದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಜಾನ್ಸನ್ ಜೇಕಬ್ ಹೊಸ ಶಿಕ್ಷಣ ನೀತಿಯ ಕುರಿತು ಮಾಹಿತಿಗಳನ್ನು ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿಯಿಂದಾಗಿ ಪದವಿ ಶಿಕ್ಷಣದಲ್ಲಾಗಿರುವ ಬದಲಾವಣೆ ಗಳು, ವಿಷಯಗಳ ಆಯ್ಕೆ ವಿಧಾನ, ವಿದ್ಯಾರ್ಥಿಗಳಿಗೆ ಆಗುವ ಅನುಕೂಲತೆ ಗಳು, ಡಿಪ್ಲೋಮಾ ಕೋರ್ಸ್‌ಗಳು, ಡಿಗ್ರಿ ಮತ್ತು ಹಾನರ್ಸ್‌ಗಿರುವ ವ್ಯತ್ಯಾಸ, ಉನ್ನತ ಶಿಕ್ಷಣದ ಅವಕಾಶಗಳು ಇತ್ಯಾದಿಗಳ ಕುರಿತಾಗಿ ತಿಳಿಸಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನದ ಕುರಿತಾಗಿ ಯಾವುದೇ ಆತಂಕ ಗೊಂದಲಗಳು ಬೇಡ. ಇದನ್ನು ಅನುಷ್ಠಾನಗೊಳಿಸುವಲ್ಲಿ ಅಗತ್ಯ ಸಿದ್ದತೆಗಳನ್ನು ಕಾಲೇಜು ನಡೆಸಿದೆ ಮತ್ತು ಗುಣಮಟ್ಟದ ಶಿಕ್ಷಣ ನೀಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಉಪಪ್ರಾಂಶುಪಾಲ ಡಾ.ರಾಬರ್ಟ್ ಕ್ಲೈವ್, ದೈಹಿಕ ಶಿಕ್ಷಣ ನಿರ್ದೇಶಕ ಬಿಜು ಜೇಕಬ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News