ಸೆ.15: ‘ದ ಲಗೂನ್’ ಮಾಲ್ ಶಿಲಾನ್ಯಾಸ
Update: 2021-09-14 22:43 IST
ಮಂಗಳೂರು, ಸೆ.14: ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆಯ ಮಾಲಕತ್ವದ ಪ್ರತಿಷ್ಠಿತ ‘ದ ಲಗೂನ್’ ಕಮರ್ಶಿಯಲ್ ಮಾಲ್‌ನ ಶಿಲಾನ್ಯಾಸ ಕಾರ್ಯಕ್ರಮವು ಇದೇ ಸೆ.15ರಂದು ಬೆಳಗ್ಗೆ 11 ಗಂಟೆಗೆ ದೇರಳಕಟ್ಟೆಯಲ್ಲಿ ನಡೆಯಲಿದೆ.
ಶಿಲಾನ್ಯಾಸ ಕಾರ್ಯಕ್ರಮವನ್ನು ಹಾಜಿ ಟಿ.ಎಂ. ಶರೀಫ್ ನೆರವೇರಿಸಲಿದ್ದಾರೆ ಎಂದು ಬಿಗ್ ಆ್ಯಪಲ್ ವೆಂಚರ್ಸ್ ಸಂಸ್ಥೆಯ ಮಾಲಕ ತನ್ವೀರ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.