ಸ್ಪಷ್ಟವಾದ ಒಡಂಬಡಿಕೆಯಿಲ್ಲದೆ ಕಾಬೂಲ್ ವಿಮಾನನಿಲ್ದಾಣ ನಿರ್ವಹಣೆ ವಹಿಸಲಾರೆ: ಕತರ್

Update: 2021-09-14 17:36 GMT

ದೋಹಾ, ಸೆ.14: ತಾಲಿಬಾನ್ ಸೇರಿದಂತೆ ಎಲ್ಲರನ್ನೂ ಒಳಗೊಂಡು ಒಂದು ಸ್ಪಷ್ಟವಾದ ಒಡಂಬಡಿಕೆಯನ್ನು ಏರ್ಪಡಿಸಿಕೊಳ್ಳದೆ ತಾನು ಕಾಬೂಲ್ ವಿಮಾನನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳುವುದಿಲ್ಲವೆಂದು ಕತರ್ ಮಂಗಳವಾರ ಎಚ್ಚರಿಕೆ ನೀಡಿದೆ.

ಅಮೆರಿಕ ಪಡೆಗಳು ಕಳೆದ ತಿಂಗಳು ನಿರ್ಗಮಿಸಿದ ಬಳಿಕ ಅಫ್ಘಾನಿಸ್ತಾನದಲ್ಲಿ ಕತರ್ ದೇಶವು ಪ್ರಮುಖ ಶಾಂತಿಸಂಧಾನಕಾರನ ಪಾತ್ರವನ್ನು ವಹಿಸುತ್ತಿದೆ. ಸಾವಿರಾರು ವಿದೇಶೀಯರು ಹಾಗೂ ಅಫ್ಘನ್ನರು ದೇಶವನ್ನು ತೊರೆಯಲು ನೆರವಾಗಿದೆ. ನೂತನ ತಾಲಿಬಾನ್ ಆಡಳಿತದ ಜೊತೆ ನಂಟನ್ನು ಹೊಂದಿರುವ ಕತರ್, ಕಾಬೂಲ್ ವಿಮಾನನಿಲ್ದಾಣದ ಕಾರ್ಯನಿರ್ವಹಣೆಗೂ ನೆರವಾಗುತ್ತಿದೆ. 

‘‘ಕಾಬೂಲ್ ವಿಮಾನನಿಲ್ದಾಣಕ್ಕೆ ಸಂಬಂಧಿಸಿದ ಪ್ರತಿಯೊಂದು ವಿಷಯವನ್ನೂ ಸ್ಪಷ್ಟವಾಗಿ ಸ್ಪಂದಿಸದೆ ಇದ್ದಲ್ಲಿ, ನಾವು ವಿಮಾನನಿಲ್ದಾಣದ ನಿರ್ವಹಣೆಯ ಹೊಣೆಗಾರಿಕೆಯನ್ನು ವಹಿಸಿಕೊಳ್ಳಲಾರೆವು’’ ಎಂದು ವಿದೇಶಾಂಗ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್ರಹ್ಮಾನ್ ಅಲ್ ತಾನಿ ತಿಳಿಸಿದ್ದಾರೆ. ‘‘ಸದ್ಯ ವಿಮಾನನಿಲ್ದಾಣದ ನಿರ್ವಹಣೆಯ ಬಗ್ಗೆ ಮಾತುಕತೆಗಳು ನಡೆಯುತ್ತಿವೆ’’ ಎಂದವರು ತಿಳಿಸಿದ್ದಾರೆ. 

ಅಮೆರಿಕ ಪಡೆಗಳ ನಿರ್ಗಮನದ ಬಳಿಕ ಕತರ್ ಏರ್ವೇಸ್ ನ ವಿಮಾನಗಳು ಕಾಬೂಲ್ ಗೆ ಹಲವಾರು ವಿಮಾನಯಾನಗಳನ್ನು ನಡೆಸಿವೆ. ನೆರವು ಸಾಮಾಗ್ರಿಗಳನ್ನು ಕೂಡಾ ವಿಮಾನದ ಮೂಲಕ ಅಫ್ಘಾನಿಸ್ತಾನಕ್ಕೆ ಪೂರೈಕೆ ಮಾಡಿದೆ ಹಾಗೂ ವಿದೇಶಿ ಪಾಸ್ಪೋರ್ಟ್ ಹೊಂದಿರುವವರನ್ನು ಹೊರಸಾಗಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News