ಆಪ್ತ ವಲಯದವರಿಗೆ ಕೋವಿಡ್ ಸೋಂಕು: ಪುಟಿನ್ ಸ್ವಯಂ ಐಸೋಲೇಶನ್

Update: 2021-09-14 18:18 GMT

ಮಾಸ್ಕೊ, ಸೆ.14: ತನ್ನ ಆಂತರಿಕ ವಲಯದ ವ್ಯಕ್ತಿಗಳಿಗೆ ಕೊರೋನ ಸೋಂಕು ತಗಲಿರುವ ಹಿನ್ನೆಲೆಯಲ್ಲಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಸ್ವಯಂ ಐಸೋಲೇಶನ್ನಲ್ಲಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಪುತಿನ್ರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿದ್ದು, ಅವರಿಗೆ ನೆಗೆಟಿವ್ ಬಂದಿರುವುದಾಗಿ ಅವು ಹೇಳಿವೆ. ಪುತಿನ್  ರಶ್ಯದ ಸ್ಪುಟ್ನಿಕ್v ಲಸಿಕೆಯ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದಾರೆ.ಅವರಿಗೆ ಎಪ್ರಿಲ್ನಲ್ಲಿ ಎರಡನೆ ಡೋಸ್ ನೀಡಲಾಗಿತ್ತೆಂದು ಕ್ರೆಮ್ಲಿನ್ (ರಶ್ಯನ್ ಸರಕಾರದ ಕಾರ್ಯಾಲಯ) ವಕ್ತಾರ ಡಿಮಿಟ್ರಿ ಪೆಸ್ಕೊವ್ ತಿಳಿಸಿದ್ದಾರೆ.

ಪುಟಿನ್ ಅವರು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಆದರೆ ವೈರಸ್ ಸೋಂಕಿತ ವ್ಯಕ್ತಿಯೊಬ್ಬರ ಜೊತೆ ಸಂಪರ್ಕಕ್ಕೆ ಬಂದ ಕಾರಣ ಅವರು ಸ್ವಯಂ ಐಸೋಲೇಶನ್ನಲ್ಲಿದ್ದಾರೆ ಎಂ ಡಿಮಿಟ್ರಿ ಪೆಸ್ಕೊವ್ ಆದರೆ ಎಷ್ಟು ಸಮಯದವರೆಗೆ ಪುಟಿನ್ ಐಸೋಲೇಶನ್ನಲ್ಲಿರುವರೆಂಬ ಬಗ್ಗೆ ಅವರು ಯಾವುದೇ ಮಾಹಿತಿ ನೀಡಿಲ್ಲ. 

ಸೋಮವಾರದಂದು ಪುಟಿನ್ಅವರು ಹಲವಾರು ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಿದ್ದರು. ಅವರು ರಶ್ಯದ ಪ್ಯಾರಾಲಿಂಪಿಕ್ ಕ್ರೀಡಾಳುಗಳನ್ನು ಭೇಟಿಯಾಗಿದ್ದರು. ಬೆಲಾರಸ್ನ ಸಹಯೋಗದೊಂದಿಗೆ ನಡೆಸಲಾದ ಜಂಟಿ ಸೇನಾ ಕವಾಯತುಗಳಲ್ಲೂ ಪಾಲ್ಗೊಂಡಿದ್ದರು ಮತ್ತು ಸಿರಿಯ ಅಧ್ಯಕ್ಷ ಬಶರ್ ಅಸ್ಸಾದ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News