×
Ad

ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದಿಂದ ಸಾಧಕರಿಗೆ ಗೌರವ

Update: 2021-09-15 18:14 IST

ಮಂಗಳೂರು, ಸೆ.15: ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ವತಿಯಿಂದ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ವಿಜೇತರಾದ ಕಾಸ್ಸಿಯಾ ಹೈಸ್ಕೂಲ್‌ನ ಎವರೆಸ್ಟ್ ಫೆಲಿಕ್ಸ್ ಕ್ರಾಸ್ತಾ ಮತ್ತು ಸಿಎ ಪರೀಕ್ಷೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಪ್ರಥಮ ರ್ಯಾಂಕ್ ಪಡೆದ ರುತ್ ಕ್ಲ್ಯಾರ್ ಡಿಸಿಲ್ವ ರನ್ನು ಇಂದು ಗೌರವಿಸಲಾಯಿತು.

ಮಂಗಳೂರು ಬಿಷಪ್ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನಾ ಸಾಧಕರನ್ನು ಅಭಿನಂದಿಸಿ ಗೌರವಿಸಿದರು.

ಈ ಸಂದರ್ಭ ಮಾತನಾಡಿದ ಬಿಷಪ್ ರೆ.ಫಾ. ಡಾ. ಪೀಟರ್ ಪೌಲ್ ಸಲ್ಡಾನಾ, ಯುವಕರು ತಮ್ಮ ಕನಸನ್ನು ನನಸಾಗಿಸುವಲ್ಲಿ ರುತ್ ಅವರು ಯುವ ಪ್ರತಿಭೆಗಳಿಗೆ ಪ್ರೇರಣೆಯಾಗಿದ್ದಾರೆ. ಇದರ ಜತೆಯಲ್ಲೇ ಎವರೆಸ್ಟ್ ಫೆಲಿಕ್ಸ್ ಹಾಗೂ ಇತರ ಶಿಕ್ಷಕರು ನಮಗೆ ಹೆಮ್ಮೆ ತಂದಿದ್ದಾರೆ ಎಂದರು.

ಜಿಲ್ಲಾ ಮಟ್ಟದ ನಾಲ್ಕು ಪ್ರಶಸ್ತಿ ವಿಜೇತ ಶಿಕ್ಷಕರಲ್ಲಿ ಎವರೆಸ್ಟ್ ಫೆಲಿಕ್ಸ್ ಕ್ರಾಸ್ತಾ ಮಾತ್ರ ಹಾಜರಿದ್ದರು. ಗೌರವ ಸ್ವೀಕರಿಸಿ ಮಾತನಾಡಿದ ಎವರೆಸ್ಟ್ ಕ್ರಾಸ್ತಾ, ಪ್ರಾಮಾಣಿಕವಾಗಿ ಹಾಗೂ ತ್ಯಾಗ ಮನೋಭಾವದಿಂದ ಕಾರ್ಯ ಮಾಡಿದವರಿಗೆ ಪ್ರಶಸ್ತಿಗಳು ಹುಡುಕಿಕೊಂಡು ಬರುತ್ತವೆ ಎಂದರು.

ಮೊನ್ಸಿಂಜರ್ ಅ.ವಂ. ಮ್ಯಾಕ್ಸಿಂ ನೊರೊನ್ನಾ, ವಿಕಾರ್ ಜನರಲ್ ಫಾ. ವಿಕ್ಟರ್ ವಿಜಯ ಲೋಬೋ, ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಯ್ ಕ್ಯಾಸ್ತಲಿನೊ ಮೊದಲಾದವರು ಉಪಸ್ಥಿತರಿದ್ದರು.

ರೆ.ಫಾ. ವಿನ್ಸೆಂಟ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News