ಕೃಷ್ಣಾಷ್ಟಮಿ ವೇಷದಿಂದ ಸಂಗ್ರಹಿಸಿದ 7 ಲಕ್ಷ ರೂ. ಹಣ ಮಕ್ಕಳ ಚಿಕಿತ್ಸೆ ವಿತರಣೆ
ಉಡುಪಿ, ಸೆ.15: ಈ ಬಾರಿಯ ಕೃಷ್ಣಾಷ್ಟಮಿ ಪ್ರಯುಕ್ತ ಹಾಲಿವುಡ್‌ನ ಡಾರ್ಕ್ ಒನ್ ಎಲೈಟ್ ವೇಷ ಹಾಕಿ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು 7,17,350 ರೂ. ಹಣವನ್ನು ಅನಾರೋಗ್ಯದಿಂದ ಬಳುತ್ತಿರುವ 8 ಮಕ್ಕಳ ಚಿಕಿತ್ಸೆ ಗಾಗಿ ಸೆ.16ರಂದು ಸಂಜೆ 5.30ಕ್ಕೆ ಕಟಪಾಡಿಯ ಪೇಟೆಬೆಟ್ಟು ಶ್ರೀ ಬಬ್ಬುಸ್ವಾಮಿ ಕೊರಗಜ್ಜ ದೇವಸ್ಥಾನದಲ್ಲಿ ವಿತರಿಸಲಾಗುವುದು ಎಂದು ರವಿ ಕಟಪಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಡಿಸಿ ಕೂರ್ಮಾ ರಾವ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಎಸ್‌ಪಿ ಎನ್.ವಿಷ್ಣುವರ್ಧನ್, ಕೇಮಾರು ಶ್ರೀ ಈಶವಿಠ್ಠಲ ಸ್ವಾಮೀಜಿ, ಕಟಪಾಡಿ ಬಬ್ಬುಸ್ವಾಮಿ ಕೊರಗಜ್ಜ ದೇಗುಲದ ಗುರಿಕಾರ ಹರೀಶ್ಚಂದ್ರ ಪಿಲಾರ್, ಭಾಗವಹಿಸಲಿದ್ದಾರೆ ಎಂದರು.
ಕಳೆದ 7 ವರ್ಷಗಳಿಂದ ಕೃಷ್ಣಾಷ್ಟಮಿ ಪ್ರಯುಕ್ತ ವಿಶೇಷ ವೇಷ ಧರಿಸಿ, ಒಟ್ಟು 79 ಲಕ್ಷ ರೂ. ಸಂಗ್ರಹಿಸಿ 41 ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡ ಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರವಿ ಫ್ರೆಂಡ್ಸ್ ಕಟಪಾಡಿ ಮಹೇಶ್ ಶೆಣೈ, ಮುಮ್ಮದ್ ರಜ್ಮೀಲಾ ಉಪಸ್ಥಿತರಿದ್ದರು.