ವೃದ್ಧ ನಾಪತ್ತೆ
Update: 2021-09-15 19:19 IST
ಉಡುಪಿ, ಸೆ.15: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬೊರ್ಗಲ್‌ಗುಡ್ಡೆ ನಿವಾಸಿ 65 ವರ್ಷ ವಯಸ್ಸಿನ ಶ್ಯಾಮ ಕೋಟ್ಯಾನ್ ಎಂಬವರು ಸೆ.13ರಿಂದ ನಾಪತ್ತೆಯಾಗಿದ್ದಾರೆ.
ಚಹರೆ: 163 ಸೆ.ಮಿ. ಎತ್ತರದ ಕೋಟ್ಯಾನ್, ತುಳು, ಕನ್ನಡ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ. ಗುಲಾಬಿ ಬಣ್ಣದ ಶರ್ಟ್ ಹಾಗೂ ಕಂದು ಬಣ್ಣದ ಲುಂಗಿ ಧರಿಸಿದ್ದಾರೆ. ಇವರನ್ನು ಯಾರಾದರೂ ಕಂಡಲ್ಲಿ ದೂರವಾಣಿ ಸಂಖ್ಯೆ: 9768219432 ಅಥವಾ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯನ್ನು (08258-232083) ಸಂಪರ್ಕಿಸುವಂತೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.