ರೋವರ್ ವಿನ್ಯಾಸ ಸ್ಪರ್ಧೆ: ಎಂಐಟಿಗೆ 3ನೇ ಸ್ಥಾನ

Update: 2021-09-15 13:50 GMT

ಮಣಿಪಾಲ, ಸೆ.15: ಅಂತಾರಾಷ್ಟ್ರೀಯ ರೋವರ್ ವಿನ್ಯಾಸ ಸ್ಪರ್ಧೆ (ಐಆರ್‌ಡಿಸಿ)-2021ರಲ್ಲಿ ಮಣಿಪಾಲದ ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಮೂರನೇ ಸ್ಥಾನ ಪಡೆದಿದೆ.

ಮಾರ್ಸ್‌ ಸೊಸೈಟಿ ದಕ್ಷಿಣ ಏಷ್ಯಾ ಆಯೋಜಿಸಿದ್ದ ಎರಡನೇ ಐಆರ್‌ಡಿಸಿಯಲ್ಲಿ ನಾಲ್ಕು ದೇಶಗಳ ಒಟ್ಟು 32 ತಂಡಗಳು ಸ್ಪರ್ಧಿಸಿದ್ದು, ಇದರಲ್ಲಿ ಎಂಐಟಿ ಮೂರನೇ ಸ್ಥಾನಿಯಾಗಿ ಸ್ಪರ್ಧೆ ಮುಗಿಸಿದೆ ಎಂದು ಎಂಐಟಿ ಪತ್ರಿಕಾ ಹೇಳಿಕೆ ಯಲ್ಲಿ ತಿಳಿಸಿದೆ.

ಐಆರ್‌ಡಿಸಿಯಲ್ಲಿ ಸ್ಪರ್ಧಿಸುವ ತಂಡಗಳು ನಿರ್ದಿಷ್ಟ ಸಮಯದಲ್ಲಿ ವ್ಯವಸ್ಥೆಯ ಪರಿಕಲ್ಪನೆ ವಿನ್ಯಾಸವನ್ನು ಮಂಡಿಸಬೇಕಿದ್ದು, ಎಂಐಟಿಯ ಮಾರ್ಸ್‌ ರೋವರ್ಸ್‌ ಮಣಿಪಾಲ ತಂಡ ಇದರಲ್ಲಿ 530 ಅಂಕಗಳನ್ನು ಪಡೆಯಿತು.

ಎಂಐಟಿಯ ಮಾರ್ಸ್‌ ರೋವರ್ಸ್‌ ಮಣಿಪಾಲ ತಂಡ ಇಂಜಿನಿಯರಿಂಗ್ ಎರಡು ಮತ್ತು ಮೂರನೇ ವರ್ಷದ 30 ವಿದ್ಯಾರ್ಥಿಗಳನ್ನು ಹೊಂದಿದ್ದು, ಮಾರ್ಸ್‌ ಮೇಲಿನ ವಿವಿಧ ಪರಿಸ್ಥಿತಿಯನ್ನು ಅವಲೋಕಿಸಿ ವಿನ್ಯಾಸವನ್ನು ಸಿದ್ಧಗೊಳಿಸಿತ್ತು. ಇದಕ್ಕಾಗಿ 26 ಪುಟಗಳ ವರದಿಯನ್ನು ಸಿದ್ಧಪಡಿಸಿ, ವೀಡಿಯೊ ದೊಂದಿಗೆ ಮಂಡಿಸಲಾಗಿತ್ತು.

ವಿಶ್ವವಿದ್ಯಾಲಯ ಮಟ್ಟದ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ನಡೆದ ಐಆರ್‌ಡಿಸಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಮಂಗಳ ಗ್ರಹದ ಮೇಲೆ ಕಾರ್ಯಾ ಚರಿಸಲು ಸಂಪೂರ್ಣ ಸುಸಜ್ಜಿತವಾದ ಮಾರ್ಸ್‌ ರೋವರ್ಸ್‌ನ್ನು ವಿನ್ಯಾಸ ಗೊಳಿಸಲು ತಿಳಿಸಲಾಗಿತ್ತು. ಈ ಸ್ಪರ್ಧೆ ಜುಲೈ-ಸೆಪ್ಟಂಬರ್ ತಿಂಗಳಲ್ಲಿ ನಡೆದಿದ್ದು ಭಾರತ, ಪೋಲಂಡ್, ಶ್ರೀಲಂಕಾ ಹಾಗೂ ಬಾಂಗ್ಲಾದೇಶಗಳ 32 ತಂಡಗಳು ಪಾಲ್ಗೊಂಡಿದ್ದವು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯನ್ನು ಪ್ರಶಂಸಿಸಿದ ಎಂಐಟಿಯ ನಿರ್ದೇಶಕ ಡಾ.ಅನಿಲ್ ರಾಣಾ, ಸಂಸ್ಥೆ ನಿರಂತರವಾಗಿ ವಿದ್ಯಾರ್ಥಿ ಗಳ ಇಂಥ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿರುವುದು ಸಾಧನೆಗೆ ಮುಖ್ಯ ಕಾರಣ ವಾಗಿದ್ದು, ಭವಿಷ್ಯದಲ್ಲೂ ಇನ್ನಷ್ಟು ಯಶಸ್ಸು ಸಿಗುವಂತಾಗಲಿ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News