ಮನೆಗೆ ನುಗ್ಗಿ ಕಳವು

Update: 2021-09-15 16:47 GMT

ಉಡುಪಿ, ಸೆ.15: ಮನೆಗೆ ನುಗ್ಗಿದ ಕಳ್ಳರು ಸೊತ್ತು ಹಾಗೂ ಮನೆಯ ಹೊರಗಡೆ ನಿಲ್ಲಿಸಿದ ಕಾರು ಕಳವು ಮಾಡಿರುವ ಘಟನೆ ಕಲ್ಯಾಣಪುರದ ಗೋಪಾಲಪುರ 4ನೇ ಕ್ರಾಸ್ ಎಂಬಲ್ಲಿ ನಡೆದಿದೆ.

ಸೆ.13ರ ಮಧ್ಯಾಹ್ನದಿಂದ ಸೆ.15ರ ಬೆಳಗಿನ ಮಧ್ಯಾವಧಿಯಲ್ಲಿ ಪೂನಾದಲ್ಲಿ ರುವ ಅಶೋಕ್ ಪೂಜಾರಿ ಎಂಬವರ ಮನೆಯ ಹಿಂಬದಿಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿದ ಕಳ್ಳರು, 30ಸಾವಿರ ರೂ. ಮೌಲ್ಯದ ಟಿ.ವಿ ಹಾಗೂ 1.40ಲಕ್ಷ ರೂ. ವೌಲ್ಯದ ಎಂ.ಎಚ್.12 ಇಎಕ್ಸ್ 2180ನೆ ನಂಬರಿನ ಕಾರು ಹಾಗೂ 3,000ರೂ. ಮೌಲ್ಯದ ಇತರ ಸೊತ್ತುಗಳನ್ನು ಕಳವು ಮಾಡಿಕೊಂಡಿದ್ದಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News