ಕೋಸ್ಟ್‌ಗಾರ್ಡ್ ಕಾರ್ಯಾಚರಣೆ; ಬೋಟ್ ಸಹಿತ 11 ಮಂದಿ ಮೀನುಗಾರರ ರಕ್ಷಣೆ

Update: 2021-09-15 17:01 GMT

ಮಂಗಳೂರು, ಸೆ.15: ಸಮುದ್ರದ ಮಧ್ಯೆ ಇಂಜಿನ್ ಕೆಟ್ಟು ಅಪಾಯಕ್ಕೀಡಾಗಿದ್ದ ಬೆಟ್ ಮತ್ತು ಅದರಲ್ಲಿದ್ದ 11ಮಂದಿ ಮೀನುಗಾರರನ್ನು ಇಂಡಿಯನ್ ಕೋಸ್ಟ್ ಗಾರ್ಡ್ ಹಡಗಿನ ಮೂಲಕ ಬುಧವಾರ ರಕ್ಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಸಾಗರ್ ಸಾಮ್ರಾಟ್ ಎಂಬ ಮೀನುಗಾರಿಕಾ ಬೋಟ್ ಮಲ್ಪೆ ಬಂದರಿನಿಂದ ಸುಮಾರು 35 ನಾಟಿಕಲ್ ಮೈಲು ದೂರದಲ್ಲಿ ಸಮುದ್ರ ಮಧ್ಯೆ ಅಪಾಯಕ್ಕೀಡಾಗಿತ್ತು. ಮೂರು ದಿನದ ಹಿಂದೆ ಹೊರಟಿದ್ದ ಬೋಟ್ ಅಪಾಯಕ್ಕೆ ಸಿಲುಕಿರುವ ಬಗ್ಗೆ ಮಂಗಳವಾರ ಸಂಜೆ ತುರ್ತು ರಕ್ಷಣೆ ಕೋರಿ ಕೋಸ್ಟ್ ಗಾರ್ಡ್ ಪಡೆಗೆ ಮನವಿ ಮಾಡಲಾಗಿತ್ತು. ಅದರಂತೆ ಮಂಗಳೂರಿನಿಂದ ಐಸಿಜಿ ಶಿಪ್ ರಾಜದೂತ್ ಮೂಲಕ ರಾತ್ರಿ 11 ಗಂಟೆ ಸುಮಾರಿಗೆ ಕೋಸ್ಟ್ ಗಾರ್ಡ್ ಪಡೆ ಸ್ಥಳಕ್ಕೆ ತೆರಳಿತ್ತು. ಆದರೆ ಭಾರೀ ಗಾಳಿಯ ಹೊಡೆತಕ್ಕೆ ರಕ್ಷಣಾ ಕಾಯರ್ ಮುಂದುವರಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.

ಬೆಳಗ್ಗೆ ಗಾಳಿಯ ರಭಸ ಕಡಿಮೆಯಾದ ವೇಳೆ ಬೋಟನ್ನು ದಡಕ್ಕೆ ಎಳೆದು ತರಲಾಗಿದೆ. ಅಲ್ಲದೆ ಬೋಟಲ್ಲಿದ್ದ 11 ಮಂದಿಯನ್ನು ರಕ್ಷಿಸಿ ಮಲ್ಪೆ ಬಂದರಿನ ಬಳಿ ಮೀನುಗಾರಿಕಾ ಇಲಾಖೆಯ ವಶಕ್ಕೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News