×
Ad

ಮೂಡುಬಿದಿರೆ : ವಿನ್ಯಾಸ ಟೈಲರಿಂಗ್ ಸೆಂಟರ್ ಶುಭಾರಂಭ

Update: 2021-09-15 22:44 IST

ಮೂಡುಬಿದಿರೆ :  ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಮತ್ತು ನೂರಾನಿ ಚಾರಿಟೇಬಲ್ ಟ್ರಸ್ಟ್ ಪುತ್ತಿಗೆ ಇದರ ಸಹಯೋಗದೊಂದಿಗೆ ವಿನ್ಯಾಸ ಟೈಲರಿಂಗ್ 19ನೇ ಸೆಂಟರ್ ಉದ್ಘಾಟನಾ ಸಮಾರಂಭವು ಪುತ್ತಿಗೆ ನೂರಾನಿ ಮಸ್ಜಿದ್ ಹಾಲ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಸರೆ ವಿಮೆನ್ಸ್ ಫೌಂಡೇಶನ್ ಇದರ ನಿರ್ದೇಶಕರಾದ ಮರ್ಯಮ್ ಶಬೀನ ಪುತ್ತಿಗೆ ವಹಿಸಿದ್ದರು. ಪುತ್ತಿಗೆ ಗ್ರಾಮ ಪಂಚಾಯತ್ ಸದಸ್ಯರಾದ ಗ್ರೆಟ್ಟ ಮಸ್ಕರೇನಸ್ ಕಾರ್ಯಕ್ರಮ  ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಮಹಿಳೆಯರಿಗೆ ಸ್ವ ಉದ್ಯೋಗದ ಮಹತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಬಿಫಾತಿಮ ಶರೀಫ್ (ಇನ್ನರ್ ವೀಲ್ ಸದಸ್ಯರು ರೋಟರಿ ಕ್ಲಬ್ ಮೂಡುಬಿದಿರೆ), ವತ್ಸಲ ರವಿ ಶಂಕರ್ ಭಟ್ (ಪೆಳಕಳ ಪುತ್ತಿಗೆ),  ಸಾರಾ ಅಬ್ಬಾಸ್ ಸೈದಲಿ (ನಿರ್ದೇಕರು ಸೈದಲೀಸ್ ಸಾರ ಅಬ್ಬಾಸ್ ಫೌಂಡೇಶನ್),  ಖೈರುನ್ನೀಸಾ ಸಯ್ಯದ್ (ಕೌನ್ಸಿಲರ್ ಸಹನಾ ಕೌನ್ಸಿಲಿಂಗ್ ಸೆಂಟರ್),  ಸಲ್ಮಾ ಉಮರ್ ಪುತ್ತಿಗೆ ಹಾಗು ಶರಫುನ್ನಿಸಾ ಉಪಸ್ಥಿತರಿದ್ದರು.

ಗುಲ್ಶನ್ ಖಿರಾಅತ್ ಪಠಿಸಿದರು, ಶಬೀನ ರಿಯಾಝ್ ಸ್ವಾಗತಿಸಿದರು. ಆತಿಕ ರಫೀಕ್ ಪ್ರಸ್ತಾವನೆಗೈದರು, ಮುಮ್ತಾಝ್ ಪಕ್ಕಲಡ್ಕ ಕಾರ್ಯಕ್ರಮ ನಿರೂಪಿಸಿದರು. ಝೊಹರಾ ಉಳ್ಳಾಲ ಸಹಕರಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News