ಚೀನಾದ ಸಿಚುವಾನ್ ನಲ್ಲಿ ಭೂಕಂಪ: ಮೂವರು ಮೃತ್ಯು, ಹತ್ತಾರು ಮಂದಿಗೆ ಗಾಯ

Update: 2021-09-16 06:06 GMT

ಬೀಜಿಂಗ್: ನೈರುತ್ಯ ಚೀನಾದಲ್ಲಿ ಗುರುವಾರ ಭೂಕಂಪ ಸಂಭವಿಸಿದ್ದು, ಮೂವರು ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭೂಕಂಪದಿಂದ ಸಿಚುವಾನ್ ಪ್ರಾಂತ್ಯದಲ್ಲಿ ಎರಡನೇ  ಅತ್ಯಂತ ಹೆಚ್ಚು ಮಟ್ಟದ ತುರ್ತುಪರಿಸ್ಥಿತಿಯ ಪರಿಸ್ಥಿತಿಯನ್ನು ಉಂಟು ಮಾಡಿದೆ ಎಂದು ವರದಿಯಾಗಿದೆ.

ಭೂಕಂಪವು ಲುಕ್ಸಿಯಾನ್ ಕೌಂಟಿಯಲ್ಲಿ ಗುರುವಾರ ಮುಂಜಾನೆ 120 ಕಿಲೋ ಮೀಟರ್‌ಗಳಷ್ಟು ವಿಸ್ತಾರವಾದ ಚೊಂಗ್‌ಕಿಂಗ್‌ನ ನೈಋತ್ಯ ದಿಕ್ಕಿನಲ್ಲಿ ಅಪ್ಪಳಿಸಿತು. ಇದರ ಸುತ್ತಮುತ್ತಲಿನ ಪ್ರದೇಶವು ಸುಮಾರು 30 ಮಿಲಿಯನ್ ಜನರನ್ನು ಹೊಂದಿದೆ.

ಕುಸಿದು ಬಿದ್ದ ಕಟ್ಟಡಗಳಿಂದ ಜನರನ್ನು ಸ್ಟ್ರೆಚರ್‌ಗಳ ಮೇಲೆ ಮೇಲಕ್ಕೆತ್ತಲು ರಕ್ಷಣಾ ಕಾರ್ಯಕರ್ತರು ಧಾವಿಸಿದರು.

ಲಕ್ಸಿಯಾನ್ ನಲ್ಲಿ ಹತ್ತಾರು ಮನೆಗಳು ಶಿಥಿಲಾವಸ್ಥೆಗೆ ತಲುಪಿದ್ದು,ಇತರ ಹಲವು ಮನೆಗಳು ಹಾನಿಗೀಡಾಗಿವೆ. ಸ್ಥಳೀಯ ಮಾಧ್ಯಮಗಳು ಆಸ್ಪತ್ರೆಯಲ್ಲಿ ಕುಸಿದ ಛಾವಣಿಗಳ ಚಿತ್ರಗಳನ್ನು ಪ್ರಕಟಿಸಿದವು. ಮನೆಯೊಳಗೆ ಹಿಂತಿರುಗದಂತೆ ಎಚ್ಚರಿಕೆ ನೀಡಿದ ನಂತರ ನಿವಾಸಿಗಳು ಬೀದಿಗಳಲ್ಲಿ ಕಾಲ ಕಳೆದರು.

ಅಮೆರಿಕದ ಜಿಯಾಲಾಜಿಕಲ್ ಸರ್ವೇ ಕಂಪನಿಯ ಪ್ರಕಾರ ಭೂಕಂಪದ ಪ್ರಮಾಣವನ್ನು 5.4 ರಷ್ಟಿತ್ತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News