ಸಿಎಯಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಗಳಿಸಿದ ರುತ್ ಡಿಸಿಲ್ವರಿಗೆ ಎಂ.ಸಿ.ಸಿ. ಬ್ಯಾಂಕಿನಿಂದ ಸನ್ಮಾನ

Update: 2021-09-16 09:48 GMT

ಮಂಗಳೂರು, ಸೆ.16: ಸಿ.ಎ. ಪರೀಕ್ಷೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಗಳಿಸಿರುವ ರುತ್ ಕ್ಲೇರ್ ಡಿಸಿಲ್ವರಿಗೆ ಎಂ.ಸಿ.ಸಿ. ಬ್ಯಾಂಕಿನ ವತಿಯಿಂದ ಸನ್ಮಾನ ಕಾರ್ಯಕ್ರಮ ಬುಧವಾರ ಬ್ಯಾಂಕಿನಲ್ಲಿ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಅವರು ರುತ್ ಡಿಸಿಲ್ವರನ್ನು ಸನ್ಮಾನಿತರಿಗೆ ಶಾಲು ಹೊದಿಸಿ, ಹೂಗುಚ್ಚ ಮತ್ತು ಸ್ಮರಣಿಕೆ ನೀಡಿ ಸನ್ಮಾನಿಸಿ ಅಭಿನಂದಿಸಿದರು. ಬಳಿಕ ಮಾತನಾಡಿದ ಅನಿಲ್ ಲೋಬೊ, ಅದ್ಭುತ ಸಾಧನೆಗೈದ ರುತ್ ರನ್ನು ಪ್ರಶಂಸಿದರು ಮತ್ತು ತಮ್ಮ ಸಿಎ ಶಿಕ್ಷಣ  ಅಭ್ಯಾಸ ಮಾಡುತ್ತಿರುವಾಗ ಎಂ.ಸಿ.ಸಿ. ಬ್ಯಾಂಕಿನ ಲೆಕ್ಕ ಪರಿಶೋಧನೆಯನ್ನು ಕೂಡ ಮಾಡಿದ್ದಾರೆ ಎಂದು ಸ್ಮರಿಸಿ ಶುಭ ಹಾರೈಸಿದರು.

 ಸನ್ಮಾನ ಸ್ವೀಕರಿಸಿ ಮಾತನಾಡಿದ ರುತ್ ಕ್ಲೇರ್ ಡಿಸಿಲ್ವ, ಅಭಿನಂದನಾ ಕಾರ್ಯಕ್ರಮ ಏರ್ಪಡಿಸಿದ ಬ್ಯಾಂಕಿನವರಿಗೆ ಧನ್ಯವಾದ ಸಮರ್ಪಿಸಿ, ಬ್ಯಾಂಕಿನ ಬಗ್ಗೆ ತಮಗೆ ಇರುವ ಅಭಿಮಾನ ಮತ್ತು ಸಂತೋಷವನ್ನು ವ್ಯಕ್ತಪಡಿಸಿದರು.

 ಕರ್ನಾಟಕ ರಾಜ್ಯ ಕ್ರಿಶ್ಚಿಯನ್ ಅಲ್ಪಸಂಖ್ಯಾತ ನಿಗಮದ ಅಧ್ಯಕ್ಷ ಜೊಯ್ಲಸ್ ಡಿಸೋಜ ಮುಖ್ಯ ಅತಿಥಿಯಾಗಿದ್ದರು. ಬ್ಯಾಂಕಿನ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವ ಸನ್ಮಾನಿತರನ್ನು ಪರಿಚಯಿಸಿದರು.

ಇದೇವೇಳೆ ಜೊಯ್ಲಸ್ ಡಿಸೋಜರನ್ನು ಕೂಡಾ ಸನ್ಮಾನಿಸಲಾಯಿತು.  

ಬ್ಯಾಂಕಿನ ನಿರ್ದೇಶಕರಾದ ಅನಿಲ್ ಪತ್ರಾವೊ, ಎಲ್‌ರೋಯ್ ಕಿರಣ್ ಕ್ರಾಸ್ಟೊ, ಜೆ. ಪಿ.ರೊಡ್ರಿಗಸ್, ಡೇವಿಡ್ ಡಿಸೋಜ, ಆ್ಯಂಡ್ರು ಡಿಸೋಜ, ಮಾರ್ಸೆಲ್ ಡಿಸೋಜ, ರೋಶನ್ ಡಿಸೋಜ, ಹೆರಾಲ್ಡ್ ಮೊಂತೇರೊ, ಡೊಲ್ಫಿ ಪತ್ರಾವೊ, ಪ್ರೀಡಾ ಡಿಸೋಜ, ವೃತ್ತಿಪರ ನಿರ್ದೇಶಕರಾದ ಸಿ.ಜಿ.ಪಿಂಟೊ, ಉಪ ಮಹಾಪ್ರಬಂಧಕರಾದ ರಾಜ್ ಮಿನೇಜಸ್ ಹಾಗೂ ರುತ್ ಕ್ಲೇರ್ ಡಿಸಿಲ್ವರ ಪೋಷಕರಾದ ರೂಪರ್ಟ್ ಡಿಸಿಲ್ವಾ ಹಾಗೂ ರೋಜಿ ಮರಿಯ ಡಿಸಿಲ್ವಾ ಉಪಸ್ಥಿತರಿದ್ದರು.

ಬ್ಯಾಂಕಿನ ಮಹಾಪ್ರಬಂಧಕ ಸುನೀಲ್ ಮಿನೇಜಸ್ ವಂದಿಸಿದರು. ಬ್ಯಾಂಕಿನ ನಿರ್ದೇಶಕಿ ಐರಿನ್ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News