ಹರ್ಷ ಮಂದರ್ ಕಚೇರಿ, ಮನೆ ಮೇಲೆ ಈಡಿ ದಾಳಿಗೆ ಸಾಮಾಜಿಕ ಹೋರಾಟಗಾರರು, ಚಿಂತಕರ ಖಂಡನೆ

Update: 2021-09-16 14:44 GMT

ಹೊಸದಿಲ್ಲಿ: ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಸಾಮಾಜಿಕ ಹೋರಾಟಗಾರ  ಹರ್ಷ ಮಂದರ್ ಅವರ ಮನೆ ಹಾಗೂ ಕಚೇರಿಗಳ ಸಹಿತ ನಗರದಲ್ಲಿರುವ ಹಲವು ಸ್ಥಳಗಳ ಮೇಲೆ ನಡೆಸಲಾದ ಜಾರಿ ನಿರ್ದೇಶನಾಲಯದ(ಈಡಿ) ದಾಳಿಯನ್ನು ಗುರುವಾರ ಸಾಮಾಜಿಕ ಹೋರಾಟಗಾರರು  ಹಾಗೂ  ಚಿಂತಕರು ಖಂಡಿಸಿದ್ದಾರೆ.

ಈ ದಾಳಿಗಳು ಸರಕಾರದ ಟೀಕಾಕಾರರನ್ನು ಮೌನವಾಗಿಸಲು "ಸರಕಾರಿ ಸಂಸ್ಥೆಗಳ ದುರುಪಯೋಗದ ಸರಣಿ" ಯ ಒಂದು ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

ಹೇಳಿಕೆಗೆ ಸಹಿ ಹಾಕಿದ 29 ಜನರಲ್ಲಿ ಸಾಮಾಜಿಕ ಹೋರಾಟಗಾರ್ತಿ ಅರುಣಾ ರಾಯ್, ಮಾಜಿ ಯೋಜನಾ ಆಯೋಗದ ಸದಸ್ಯೆ ಸೈಯಿದಾ ಹಮೀದ್, ಅರ್ಥಶಾಸ್ತ್ರಜ್ಞ ಜೀನ್ ಡ್ರೀಝ್, ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಡಿಯು ಪ್ರೊಫೆಸರ್ ಅಪೂರ್ವಾನಂದ್, ಮಹಿಳಾ ಹೋರಾಟಗಾರರಾದ ಕವಿತಾ ಕೃಷ್ಣನ್ ಮತ್ತು ಅನ್ನಿ ರಾಜಾ ಸೇರಿದಂತೆ ಇತರರು ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News