ಮಂಗಳೂರು: ದಾಸ್ತಾನಿರಿಸಿದ್ದ ಅಕ್ರಮ ಪೆಟ್ರೋಲಿಯಂ ಉತ್ಪನ್ನ ವಶ

Update: 2021-09-16 14:11 GMT

ಮಂಗಳೂರು, ಸೆ.16: ನಗರ ಹೊರವಲಯದ ಮರೋಳಿಯ ಯಮುನಾ ಅರ್ಥ್ ಮೂವರ್ಸ್ ಶೆಡ್‌ವೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾಗಿದ್ದ ಪೆಟ್ರೋಲಿಂ ಉತ್ಪನ್ನವನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯ ಮೇರೆಗೆ ಗುರುವಾರ ಶೆಡ್‌ಗೆ ದಾಳಿ ನಡೆಸಿದ ಪೊಲೀಸರು ಅಕ್ರಮವಾಗಿ ದಾಸ್ತಾನು ಮಾಡಿದ 15,000 ಲೀ. ಪೆಟ್ರೋಲಿಯಂ ಉತ್ಪನ್ನ ಹಾಗು ಟ್ಯಾಂಕ್‌ನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ದಾಳಿಯ ವೇಳೆ ಶೆಡ್‌ನಲ್ಲಿ ಓರ್ವನಿದ್ದು, ಆತನಲ್ಲಿ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಂಬಂಧಿಸಿ ಯಾವುದೇ ಪರವಾನಿಗೆ ಅಥವಾ ದಾಖಲೆಗಳು ಇರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ವಶಪಡಿಸಿಕೊಂಡ ಸೊತ್ತಿನ ಒಟ್ಟು ಮೌಲ್ಯ 12.5 ಲಕ್ಷ ರೂ.ಆಗಿದ್ದು, ಈ ಬಗ್ಗೆ ಕಂಕನಾಡಿ ನಗರ ಠಾಣೆಯಲ್ಲಿ ಯಮುನಾ ಅರ್ಥ್ ಮೂವರ್ಸ್‌ ಮಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News