ಉಡುಪಿ: ಸೆ.17ರಂದು 300 ಲಸಿಕಾ ಕೇಂದ್ರಗಳಲ್ಲಿ 80,000 ಲಸಿಕೆ ಲಭ್ಯ

Update: 2021-09-16 15:12 GMT

ಉಡುಪಿ, ಸೆ.16:  ಜಿಲ್ಲೆಯಲ್ಲಿ ಸೆ.17ರಂದು ಮಹಾ ಲಸಿಕಾ ಮೇಳವೊಂದು ನಡೆಯಲಿದ್ದು, ಜಿಲ್ಲೆಯಾದ್ಯಂತ ಒಟ್ಟು 300 ಲಸಿಕಾ ಕೇಂದ್ರಗಳನ್ನು ತೆರೆದು ಒಟ್ಟು 80000 ಲಸಿಕೆಗಳನ್ನು ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ. ತಿಳಿಸಿದ್ದಾರೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಪ್ರಥಮ ಯಾ ಎರಡನೇ ಡೋಸ್ ಲಸಿಕೆಯನ್ನು ನೀಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 18 ಮೇಲ್ಪಟ್ಟ ಒಟ್ಟು 10,02,762 ಮಂದಿಯಲ್ಲಿ ಶೇ.84.6 ಮಂದಿಗೆ ಲಸಿಕೆಯನ್ನು ನೀಡಲಾಗಿದೆ. ಇನ್ನು 1,58,733 ಮಂದಿಗೆ ಪ್ರಥಮ ಡೋಸ್ ಲಸಿಕೆ ನೀಡಲು ಬಾಕಿ ಇದೆ. ಅದೇ ರೀತಿ ಸೆ.16ರವರೆಗೆ 33,866 ಮಂದಿ 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿದ್ದು (ಪ್ರಥಮ ಡೋಸ್ ಲಸಿಕೆ ಪಡೆದು 84 ದಿನ ಪೂರ್ಣಗೊಂಡವರು ಮಾತ್ರ), ಅವರೆಲ್ಲರೂ ನಾಳೆ ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆಯನ್ನು ಪಡೆದು ಕೊಳ್ಳಬಹುದು ಎಂದರು.

ಉಡುಪಿ ತಾಲೂಕಿನ 135 ಲಸಿಕಾ ಕೇಂದ್ರಗಳಲ್ಲಿ 16,484 ಮೊದಲ ಡೋಸ್, 15557 ಎರಡನೇ ಡೋಸ್ ಸೇರಿದಂತೆ 32041 ಮಂದಿ, ಕಾರ್ಕಳ ತಾಲೂಕಿನಲ್ಲಿ 81 ಲಸಿಕಾ ಕೇಂದ್ರಗಳಲ್ಲಿ 14,222 ಮೊದಲ ಹಾಗೂ 10506 ಎರಡನೇ ಡೋಸ್ ಸೇರಿದಂತೆ ಒಟ್ಟು 24,728 ಮಂದಿ ಹಾಗೂ ಕುಂದಾಪುರ ತಾಲೂಕಿನ 96 ಲಸಿಕಾ ಕೇಂದ್ರಗಳಲ್ಲಿ 20,466 ಮೊದಲ ಡೋಸ್‌ಗೆ ಹಾಗೂ 24834 ಮಂದಿ ಎರಡನೇ ಡೋಸ್ ಪಡೆಯಲು ಬಾಕಿ ಇದ್ದು, ಇವರು ಬಂದು ನಾಳೆ ಲಸಿಕೆಯನ್ನು ಪಡೆಯಬಹುದಾಗಿದೆ.

ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ಸಂಖ್ಯೆ:9663957222 ನ್ನು ಸಂಪರ್ಕಿಸಬಹುದು. ಸಮಯ ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ. ತಾಲೂಕು ಆಸ್ಪತ್ರೆ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಸಂಜೆ 6:00 ರವರೆಗೂ ಲಸಿಕಾಕರಣ ನಡೆಯುತ್ತದೆ ಎಂದು ಆರೋಗ್ಯ ಇಲಾಖೆಯ ಪ್ರಕಟಣೆ ತಿಳಿಸಿದೆ.

ಜಿಲ್ಲೆಯ ಮೂರು ಗ್ರಾಪಂಗಳಲ್ಲಿ (ಕಾವ್ರಾಡಿ, ಬಳ್ಕೂರು, ಕಾಡೂರು) ಶೇ.100ರಷ್ಟು ಮೊದಲ ಡೋಸ್‌ನ್ನು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News