ಕುದ್ರೆಮುಖ ಕಂಪೆನಿ ಚುನಾವಣೆ: ಇಂಟಕ್ ಜಯಭೇರಿ

Update: 2021-09-16 15:38 GMT

ಮಂಗಳೂರು, ಸೆ.16: ಕುದ್ರೆಮುಖ ಅದಿರು ಕಂಪೆನಿ ಕಾರ್ಮಿಕ ಸಂಘಟನೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಇಂಟಕ್ ಬೆಂಬಲಿತ ಕುದ್ರೆಮುಖ ಶ್ರಮಶಕ್ತಿ ಸಂಘಟನೆ (ಕೆಎಸ್‌ಎಸ್‌ಎಸ್) ಚಲಾವಣೆಯಾದ 471 ಮತಗಳ ಪೈಕಿ 245 ಮತ ಪಡೆದು ಜಯಭೇರಿ ಬಾರಿಸಿದೆ.

ಬಿಎಂಎಸ್ ಸಂಯೋಜಿಯ ಕುದ್ರೆಮುಖ್ ಮಜ್ದೂರ್ ಸಂಘ 220 ಮತ ಪಡೆಯಿತು. ಒಂದು ಮತ ಅಸಿಂಧುವಾಗಿತ್ತು ಕಳೆದ ಎರಡು ಅವಧಿಯಲ್ಲಿ ಇಲ್ಲಿ ಬಿಎಂಎಸ್ ಜಯ ಗಳಿಸಿತ್ತು ಎಂದು ಹೇಳಲಾಗಿದೆ. ಗೆಲುವಿನ ಬಳಿಕ ಸಂಸ್ಥೆ ವಠಾರದಲ್ಲಿ ನಡೆದ ವಿಜಯೋತ್ಸವದಲ್ಲಿ ಇಂಟಕ್ ರಾಜ್ಯಾಧ್ಯಕ್ಷ ರಾಕೇಶ್ ಮಲ್ಲಿ ಮಾತನಾಡಿ ಸಂಸ್ಥೆಯ ಎಲ್ಲ ಕಾರ್ಮಿಕರ ಹಿತರಕ್ಷಣೆಗೆ ಇಂಟಕ್ ಬದ್ದ ಎಂದರು. 

ಇಂಟಕ್ ಜಿಲ್ಲಾಧ್ಯಕ್ಷ ಮನೋಹರ್ ಶೆಟ್ಟಿ, ಕೆಎಸ್ಸೆಸ್ಸೆಸ್ ಸಂಘಟನಾ ಕಾರ್ಯದರ್ಶಿ ಸುರೇಶ್ ಬಾಬು ಮಾತನಾಡಿದರು. ಇಂಟಕ್ ಮುಂದಾಳು ಗಳಾದ ಸುರೇಶ್ ಪಿ.ಕೆ., ಅಬೂಬಕ್ಕರ್, ರಹೀಮ್, ಪುನೀತ್, ಕೆಎಸ್ಸೆಸ್ಸೆಸ್ ಪ್ರಧಾನ ಕಾರ್ಯದರ್ಶಿ ವೆಂಕಟರಾಯ, ಸಹಾಯಕ ಪ್ರಧಾನ ಕಾರ್ಯದರ್ಶಿ ರಾಜ್ ಗುರು, ಉಪಾಧ್ಯಕ್ಷ ಕೆಂಚೇ ಗೌಡ, ಶಾಖಾಧ್ಯಕ್ಷ ಚೆನ್ನಕೇಶವ, ಕೋಶಾಧಿಕಾರಿ ರಮಾನಾಥ ಅಮೀನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News