ಸೆ.17- ಅ.7 ; ಬಿಜೆಪಿಯಿಂದ ಸೇವೆ ಮತ್ತು ಸಮರ್ಪಣೆ ಅಭಿಯಾನ -ಗಣೇಶ್ ಕಾರ್ನಿಕ್

Update: 2021-09-16 16:10 GMT

ಮಂಗಳೂರು, ಸೆ.16: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ದಿನವಾದ ಸೆ.17ರಿಂದ ಬಿಜೆಪಿಯಿಂದ 20 ದಿನಗಳ ಕಾಲ ರಾಷ್ಟಾದ್ಯಂತ ಸೇವೆ ಮತ್ತು ಸಮರ್ಪಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾ.ಗಣೇಶ್ ಕಾರ್ನಿಕ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದ  ಅಂಗವಾಗಿ ಪ್ರಧಾನ ಮಂತ್ರಿ ಗಳ ಜೀವನ ಸಾಧನೆಗಳ ಕುರಿತು ಭಿತ್ತಿ ಫಲಕಗಳನ್ನು ಜಿಲ್ಲಾ ಮಟ್ಟದಲ್ಲಿ ಪ್ರದರ್ಶಿಸ ಲಾಗುವುದು.ದಿವ್ಯಾಂಗರಿಗೆ ಸಲಕರಣೆ ವಿತರಣೆ,ಉಚಿತ ರೋಗ್ಯ ತಪಾಸಣಾ ಶಿಬಿರ,ಅನಾಥಾಶ್ರಮ,ಕೊಳಗೇರಿ ,ಆಸ್ಪತ್ರೆ, ವೃದ್ಧಾಶ್ರಮ ಸೇರಿದಂತೆ ವಿವಿಧ ಕಡೆ ಹಣ್ಣು ಹಂಪಲು ವಿತರಣೆ, ಪ್ರತಿ ಬೂತ್ ಮಟ್ಟದಲ್ಲಿ ಗರೀಬ್ ಕಲ್ಯಾಣ್ ಯೋಜನೆಯ ಉಚಿತ ಪಡಿತರ ಚೀಲ ವಿತರಣೆ ನಡೆಯಲಿದೆ. ಜಿಲ್ಲೆಗಳಲ್ಲಿ ಯುವ ಮೋರ್ಛಾ ವತಿಯಿಂದ ರಕ್ತದಾನ ಶಿಬಿರ ನಡೆಯಲಿದೆ.

ಅಕ್ಟೋಬರ್‌ 2ರಂದು ಮಹಾತ್ಮ ಗಾಂಧಿ ಜಯಂತಿ ಯದಿನದಂದು ಸ್ವಚ್ಛ ಭಾರತ ಅಭಿಯಾನದ ಇನ್ನೊಂದು ಹಂತದ ಕಾರ್ಯಕ್ರಮ, ಸಣ್ಣ ಕುಶಲ ಕರ್ಮಿಗಳಿಗೆ, ಖಾದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ಷೇತ್ರದ ಕುಶಲ ಕರ್ಮಿಗಳಿಗೆ ವಿಶೇಷ ಗೌರವ ನೀಡಲಾಗುವುದು.

ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್ ಧ್ಯೇಯ ದೊಂದಿಗೆ ವೆಬೆಕ್ಸ್, ಸಭೆ,ವಿಚಾರ ಸಂಕಿರಣ ಮತ್ತು ಸ್ಥಳೀಯ ಮಟ್ಟದಲ್ಲಿ ಕಾರ್ಯಕ್ರಮ ನಡೆಯಲಿದೆ.ನದಿಗಳ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ.ಕೋವಿಡ್ -19 ರಿಂದ ಅನಾಥವಾಗಿರುವ ಮಕ್ಕಳನ್ನು ಸಂಬಂಧಪಟ್ಟ ಅಧಿಕಾರಿಗಳ ಮೂಲಕ 'ಪಿ ಎಂ ಕೇರ್ಸ್ ಫಾರ್ ಚಿಲ್ಟನ್' ಉಪಕ್ರಮ ದೊಂದಿಗೆ ಅಂತಹ ಮಕ್ಕಳು ಈ ಸೌಲಭ್ಯದ ಸುರಕ್ಷೆಯನ್ನು ಪಡೆದುಕೊಳ್ಳಲು ಸಹಕರಿಸಲಿದ್ದಾರೆ.

ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 7 ರವರೆಗೆ ಗೌರವಾನ್ವಿತ ಪ್ರಧಾನಮಂತ್ರಿಗಳು ಸ್ವೀಕರಿಸಿದ ಉಡುಗೊರೆಗಳು ಸ್ಮರಣಿಕೆಗಳು ಇತ್ಯಾದಿಗಳು https://moments.govin ನಲ್ಲಿ ಹರಾಜಿಗೆ ಲಭ್ಯವಿರುತ್ತದೆ. ಹರಾಜಿನಲ್ಲಿ ಸಂಗ್ರಹಿಸಿದ ನಿಧಿಯನ್ನು ಈ ಹಿಂದಿನಂತೆಯ 'ನಮಾಮಿ ಗಂಗೆ ಯೋಜನೆ'ಗೆ ಬಳಸಿಕೊಳ್ಳಲಾಗುವುದು, ನಮ್ಮ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಮ್ಮೆಲ್ಲರಲ್ಲಿ ರಾಷ್ಟ್ರ ನಿರ್ಮಾಣದಲ್ಲಿ ನಿಮ್ಮ ಕೊಡುಗೆ ಏನು ಎಂಬುದನ್ನು ವಿವರಿಸಿ ಪ್ರತಿಜ್ಞೆಯನ್ನು ಕೈ ಗೊಂಡು ದಾಖಲಿಸಬಹುದಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಜಗದೀಶ್ ಶೇಣವ,ಕಸ್ತೂರಿ ಪಂಜ, ರವಿಶಂಕರ್ ಮಿಜಾರ್, ರಾಧಾಕೃಷ್ಣ, ಸಂದೇಶ್ ಶೆಟ್ಟಿ  ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News