ಚೀನಾ: 71% ಜನತೆಗೆ ಪೂರ್ಣ ಲಸಿಕೀಕರಣ

Update: 2021-09-16 17:19 GMT

ಬೀಜಿಂಗ್, ಸೆ.16: ಚೀನಾದ ಜನಸಂಖ್ಯೆಯ 71%ದಷ್ಟು , ಅಂದರೆ 1 ಬಿಲಿಯನ್‌ಗೂ ಅಧಿಕ ಮಂದಿ ಕೊರೋನ ವಿರುದ್ಧದ ಸಂಪೂರ್ಣ ಲಸಿಕೆ ಪಡೆದಿದ್ದಾರೆ ಎಂದು ಸರಕಾರದ ಅಂಕಿಅಂಶ ಮಾಹಿತಿ ನೀಡಿದೆ.

ಸೆಪ್ಟಂಬರ್ 15ರವರೆಗೆ ದೇಶದಾದ್ಯಂತ 2.16 ಬಿಲಿಯನ್ ಲಸಿಕೆ ಡೋಸ್ ನೀಡಲಾಗಿದೆ. ಕೊರೋನ ಸೋಂಕು ಹರಡುವಿಕೆಯನ್ನು ಬಹುತೇಕ ನಿಯಂತ್ರಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವಕ್ತಾರ ಮಿ ಫೆಂಗ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಈ ವರ್ಷದ ಅಂತ್ಯದೊಳಗೆ ದೇಶದ 80% ಮಂದಿಗೆ ಪೂರ್ಣ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಕಳೆದ ತಿಂಗಳು ಚೀನಾದ ಉನ್ನತ ಸೂಕ್ಷ್ಮರೋಗಾಣು ಶಾಸ್ತ್ರಜ್ಞ ಝಾಂಗ್ ನನ್ಷಾನ್ ಹೇಳಿದ್ದರು. ಈ ಮಧ್ಯೆ ಚೀನಾದ ಆಗ್ನೇಯ ಪ್ರಾಂತ್ಯ ಫುಜಿಯಾನ್‌ನಲ್ಲಿ ಡೆಲ್ಟಾ ರೂಪಾಂತರ ಸೋಂಕಿನ ಪ್ರಕರಣ ತೀವ್ರಗೊಂಡಿದ್ದು ಶಾಲಾ ಮಕ್ಕಳ ಸಹಿತ ಸುಮಾರು 200 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News