ಅಫ್ಘಾನ್‌ನಲ್ಲಿ ಕ್ರಮಬದ್ಧ ಸೇನಾಪಡೆ ರಚನೆಗೆ ನಿರ್ಧಾರ: ತಾಲಿಬಾನ್ ಘೋಷಣೆ

Update: 2021-09-16 17:55 GMT

ಕಾಬೂಲ್, ಸೆ.16: ಅಫ್ಘಾನಿಸ್ತಾನದಲ್ಲಿ ಕ್ರಮಬದ್ಧ ಸೇನಾಪಡೆಯನ್ನು ರಚಿಸುವ ಮೂಲಕ ದೇಶದ ಸುರಕ್ಷತೆಯನ್ನು ಖಾತರಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅಫ್ಘಾನ್‌ನ ರಕ್ಷಣಾ ಸಿಬಂದಿ ಮುಖ್ಯಸ್ಥ ಖಾರಿ ಫಸಿಹುದ್ದೀನ್ ಘೋಷಿಸಿದ್ದಾರೆ.

ಈ ಹಿಂದಿನ ಸರಕಾರದ ಅವಧಿಯಲ್ಲಿ ಸೇನಾಪಡೆಯಲ್ಲಿ ಕರ್ತವ್ಯ ನಿರ್ವಹಿಸಿದ ಯೋಧರನ್ನೂ ಈ ನೂತನ ಪಡೆ ಹೊಂದಲಿದೆ. ಸೇನಾ ತರಬೇತಿ ಪಡೆದ ಮತ್ತು ದಕ್ಷರನ್ನು ಸೇನೆಗೆ ನಿಯೋಜಿಸುವ ಮೂಲಕ ದೇಶಕ್ಕೆ ಎದುರಾಗುವ ಬಾಹ್ಯ ಮತ್ತು ಆಂತರಿಕ ಬೆದರಿಕೆಯನ್ನು ಸಮರ್ಥವಾಗಿ ಎದುರಿಸುವ ಉದ್ದೇಶವಿದೆ ಎಂದವರು ಹೇಳಿರುವುದಾಗಿ ಟೋಲೋ ನ್ಯೂಸ್ ವರದಿ ಮಾಡಿದೆ.

ಈ ಮಧ್ಯೆ, ಸೇನಾಪಡೆಯನ್ನು ಸೇರಿಕೊಳ್ಳುವಂತೆ ತಮಗೆ ಆಹ್ವಾನ ಬಂದಿಲ್ಲ ಎಂದು ಮಾಜಿ ಸೇನಾ ಸಿಬಂದಿ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಅಫ್ಘಾನ್ ಸೇನೆಯಲ್ಲಿದ್ದ ಸುಮಾರು 3 ಲಕ್ಷ ಯೋಧರ ಭವಿಷ್ಯದ ಬಗ್ಗೆ ತಾಲಿಬಾನ್‌ಗಳು ಶೀಘ್ರ ನಿರ್ಧಾರಕ್ಕೆ ಬರಬೇಕು ಎಂದು ಅಫ್ಘಾನ್‌ನ ಮಾಜಿ ಸೇನಾಧಿಕಾರಿಯೊಬ್ಬರು ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News