×
Ad

ಟೈಮ್ಸ್‌ನ 100 ಪ್ರಭಾವಶಾಲಿಗಳ ಪಟ್ಟಿಯಲ್ಲಿ ತಾಲಿಬಾನ್‌ನ ಮುಲ್ಲಾ ಬರಾದರ್

Update: 2021-09-16 23:26 IST

ವಾಷಿಂಗ್ಟನ್, ಸೆ.16: ಅಫ್ಘಾನ್‌ನಲ್ಲಿ ನೂತನವಾಗಿ ರಚನೆಯಾಗಿರುವ ಹಂಗಾಮಿ ಸರಕಾರದ ಉಪಪ್ರಧಾನಿಮುಲ್ಲಾ ಅಬ್ದುಲ್ ಘನಿ ಬರಾದರ್ ಟೈಮ್ಸ್ ಪತ್ರಿಕೆಯ 2021ರ ಸಾಲಿನ ಅತ್ಯಂತ ಪ್ರಭಾವಶಾಲೀ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ದೋಹಾದಲ್ಲಿ ತಾಲಿಬಾನ್-ಅಮೆರಿಕ ಮಧ್ಯೆ ನಡೆದ ಶಾಂತಿ ಮಾತುಕತೆಯಲ್ಲಿ ಬರಾದರ್ ತಾಲಿಬಾನ್ ನಿಯೋಗದ ನೇತೃತ್ವ ವಹಿಸಿದ್ದರು.

ತಾಲಿಬಾನ್-ಅಮೆರಿಕ ಶಾಂತಿ ಮಾತುಕತೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಬರಾದಾರ್ ರೂಪಿಸಿದ್ದರು. ಅಫ್ಘಾನ್‌ನ ಮಾಜಿ ಸರಕಾರಿ ಸಿಬಂದಿಗಳಿಗೆ ಕ್ಷಮಾದಾನ, ರಕ್ತಪಾತವಿಲ್ಲದೆ ಕಾಬೂಲ್ ವಶಪಡಿಸಿ ಕೊಳ್ಳುವುದು, ನೆರೆಯ ದೇಶಗಳೊಂದಿಗೆ, ವಿಶೇಷವಾಗಿ ಪಾಕಿಸ್ತಾನ ಮತ್ತು ಚೀನಾದೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಮುಂತಾದ ನಿರ್ಧಾರಗಳನ್ನು ಬರಾದಾರ್ ಕೈಗೊಂಡಿದ್ದರು ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News