ಐಸಿಸ್‌ನ ಗ್ರೇಟರ್ ಸಹಾರ ಮುಖ್ಯಸ್ಥ ಅದ್ನಾನ್ ಹತ್ಯೆ: ಫ್ರಾನ್ಸ್ ಘೋಷಣೆ

Update: 2021-09-16 17:57 GMT

ಪ್ಯಾರಿಸ್, ಸೆ.16: ಆಫ್ರಿಕಾದ ಸಹೇಲ್ ಪ್ರಾಂತ್ಯದಲ್ಲಿ ನಿಯೋಜಿತವಾಗಿರುವ ತನ್ನ ಪಡೆಗಳು ಐಸಿಸ್ ಸಂಘಟನೆಯ ಗ್ರೇಟರ್ ಸಹಾರ ವಿಭಾಗದ ಮುಖ್ಯಸ್ಥ ಅದ್ನಾನ್ ಅಬು ವಾಲಿದ್ ಅಲ್ ಸಹ್ರಾವಿಯನ್ನು ಹತ್ಯೆ ಮಾಡಿವೆ ಎಂದು ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುವೆಲ್ ಮಾಕ್ರೋನ್ ಗುರುವಾರ ಟ್ವೀಟ್ ಮಾಡಿದ್ದಾರೆ.

2017ರಲ್ಲಿ ನೈಗರ್‌ನಲ್ಲಿ ಅಮೆರಿಕದ ಸೇನಾಪಡೆಯ ಮೇಲೆ ಹಾಗೂ 2020ರಲ್ಲಿ ಫ್ರಾನ್ಸ್ ನೇತೃತ್ವದ ವಿದೇಶಿ ನೆರವು ಪಡೆಯ ಮೇಲೆ ಮಾರಣಾಂತಿಕ ದಾಳಿ ಎಸಗಿದ್ದ ಅದ್ನಾನಿಯನ್ನು ಫ್ರಾನ್ಸ್ ಪಡೆ ಹತ್ಯೆ ಮಾಡಿದ್ದು ಇದು ಭಯೋತ್ಪಾದನೆಯ ವಿರುದ್ಧದ ನಮ್ಮ ಹೋರಾಟಕ್ಕೆ ದೊರೆತ ಪ್ರಮುಖ ಯಶಸ್ಸು ಆಗಿದೆ ಎಂದು ಮಾಕ್ರೋನ್ ಹೇಳಿದ್ದಾರೆ.

ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಮಿಲಿಯನ್ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕ ಘೋಷಿಸಿತ್ತು.

ಅಮೆರಿಕ ಪಡೆಯ ಮೇಲೆ ಐಸಿಸ್ ನಡೆಸಿದ ದಾಳಿಯಲ್ಲಿ 4 ಅಮೆರಿಕ ಯೋಧರ ಸಹಿತ 8 ಯೋಧರು ಮೃತಪಟ್ಟಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News