ಪಾಕ್ ತಲುಪಿದ ಅಫ್ಗಾನ್ ಮಹಿಳಾ ಫುಟ್‌ಬಾಲ್ ತಂಡ

Update: 2021-09-16 18:02 GMT
photo: twitter.com/AJEnglish

ಇಸ್ಲಮಾಬಾದ್, ಸೆ.16: ತಾಲಿಬಾನ್‌ಗಳಿಂದ ಬೆದರಿಕೆ ಎದುರಿಸುತ್ತಿರುವ ಅಫ್ಗಾನ್‌ನ ಮಹಿಳಾ ಫುಟ್‌ಬಾಲ್ ತಂಡದ 32 ಸದಸ್ಯೆಯರು ತಮ್ಮ ಕುಟುಂಬ ಸದಸ್ಯರೊಂದಿಗೆ ಗುರುವಾರ ಪಾಕಿಸ್ತಾನ ತಲುಪಿದ್ದಾರೆ ಎಂದು ವರದಿಯಾಗಿದೆ.

ಪಾಕ್ ಸರಕಾರ ಇವರನ್ನು ತೆರವುಗೊಳಿಸಲು ತುರ್ತು ಮಾನವೀಯ ವೀಸಾವನ್ನು ಒದಗಿಸಿತ್ತು ಎಂದು ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ರಾಷ್ಟ್ರೀಯ ಜ್ಯೂನಿಯರ್ ಬಾಲಕಿಯರ ತಂಡದ ಈ ಆಟಗಾರ್ತಿಯರು ಖತರ್‌ಗೆ ಪ್ರಯಾಣಿಸಿ ಅಲ್ಲಿ 2022ರ ಫಿಫಾ ವಿಶ್ವಕಪ್ ಟೂರ್ನಿಗಾಗಿ ಸಿದ್ಧಗೊಳಿಸಿದ ಕೇಂದ್ರದಲ್ಲಿ ತಂಗಬೇಕಿತ್ತು. ಆದರೆ ಆಗಸ್ಟ್ 26ರಂದು ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಬಾಂಬ್ ಸ್ಫೋಟಗೊಂಡ ಬಳಿಕ ಈ ಯೋಜನೆ ಅಸ್ತವ್ಯಸ್ತಗೊಂಡು ಫುಟ್‌ಬಾಲ್ ತಂಡದವರು ಅತಂತ್ರ ಸ್ಥಿತಿಯಲ್ಲಿ ಸಿಲುಕಿದ್ದರು. ಮಹಿಳೆಯರು ಕ್ರೀಡೆಯಲ್ಲಿ ಪಾಲ್ಗೊಳ್ಳುವ ಅಗತ್ಯವಿಲ್ಲ ಎಂಬ ತಾಲಿಬಾನ್ ಎಚ್ಚರಿಕೆಯ ಹಿನ್ನೆಲೆಯಲ್ಲಿ ಈ ತಂಡಕ್ಕೆ ತಾಲಿಬಾನ್‌ಗಳಿಂದ ಬೆದರಿಕೆ ಎದುರಾಗಿತ್ತು ಎಂದು ಪಾಕಿಸ್ತಾನದ ಡಾನ್ ಪತ್ರಿಕೆ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News