ಮಂಗಳೂರು : 'ನೀವಿಯಸ್ ಸೊಲ್ಯೂಷನ್ಸ್' ಆರಂಭ

Update: 2021-09-17 06:50 GMT

ಮಂಗಳೂರು : 'ನೀವಿಯಸ್ ಸೊಲ್ಯೂಷನ್ಸ್' ಮಂಗಳೂರಿಗೆ ವಿಸ್ತರಿಸಿದ್ದು, 210 ಆಸನ ಸಾಮರ್ಥ್ಯದ ಅತ್ಯಾಧುನಿಕ ತಂತ್ರಜ್ಞಾನ ಅಭಿವೃದ್ಧಿ ಕೇಂದ್ರವನ್ನು ನಗರದ ಫಲ್ನೀರ್ ನಲ್ಲಿ ಗುರುವಾರ ಉದ್ಘಾಟಿಸಲಾಯಿತು.

ಉದ್ಘಾಟನೆಯ ಮುಖ್ಯ ಅತಿಥಿಯಾಗಿ ಚಿತ್ರ ನಟ ರಕ್ಷಿತ್ ಶೆಟ್ಟಿ ಮತ್ತು ಗೌರವ ಅತಿಥಿಯಾಗಿ ಮಾಳವೀಯ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಜೈಪುರ್ ಇದರ ನಿರ್ದೇಶಕರು ಹಾಗೂ ಎನ್ಐಟಿಕೆ ಸುರತ್ಕಲ್ ಇದರ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮಾಜಿ ಮುಖ್ಯಸ್ಥರಾದ ಡಾ. ಉದಯ ಕುಮಾರ್ ಆರ್ ಯರಗಟ್ಟಿ ಅವರು ಭಾಗವಹಿಸಿದ್ದರು.

ಗೂಗಲ್ ಕ್ಲೌಡ್ “ಬ್ರೇಕ್ ಥ್ರೂ ಪಾರ್ಟ್ನನರ್ ಪ್ರಶಸ್ತಿ ವಿಜೇತ ಸಂಸ್ಥೆ ನೀವಿಯಸ್ ಸೊಲ್ಯೂಷನ್ಸ್ ಇದರ ಪ್ರಧಾನ ಕಚೇರಿ ಉಡುಪಿಯಲ್ಲಿದ್ದು, ಮಂಗಳೂರಿನ ನೂತನ ಕಚೇರಿಯು 16,000 ಚದರ ಅಡಿ ವಿಸ್ತಾರವಾಗಿದ್ದು 210 ಸಿಬ್ಬಂದಿಗಳಿಗೆ ಆಸನ ವ್ಯವಸ್ಥೆ ಹೊಂದಿದೆ. ಕಚೇರಿಯು ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿದ್ದು, ಈ ಪ್ರದೇಶದಲ್ಲಿ ಹಳೆಯ ಶೈಲಿಯ ಸಾಂಪ್ರದಾಯಿಕ ಮನೆಯ ವಾತಾವರಣವನ್ನು ಸೃಷ್ಠಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ನೀವಿಯಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಯೋಗ್ ಶೆಟ್ಟಿಯವರು, “ನಮ್ಮ ಅತಿದೊಡ್ಡ ಮತ್ತು ವಿನೂತನ ಕಾರ್ಯ ಸ್ಥಳ ಮಂಗಳೂರಿನ ಕಚೇರಿಯು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ನಾವು ಉತ್ಸಾಹ ಭರಿತರಾಗಿ ಮಂಗಳೂರಿನಲ್ಲಿ ಹೊಸ ಬೇರುಗಳನ್ನು ಹಾಕುತ್ತಿದ್ದಂತೆ, ಪ್ರತಿಯೊಂದು ವಿಚಾರದಲ್ಲಿ ಉದ್ಯೋಗಿಗಳನ್ನು ಸಕ್ರಿಯಗೊಳಿಸುವ ವಾತಾವರಣವನ್ನು ಸೃಷ್ಟಿಸುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ನಮ್ಮ ಗ್ರಾ ಹಕರಿಗೆ ನಮ್ಮ ಡಿಜಿಟಲ್ ಟ್ರಾನ್ಸ್ -ಫಾರ್ಮೇಶನ್ ಕಾರ್ಯಕ್ರಮಗಳನ್ನು ವರ್ಧಿಸುವ ಮೂಲಕ, ಸ್ಥಳೀಯ ಇಂಜಿನಿಯರಿಂಗ್ ಪ್ರತಿಭೆಗಳನ್ನು ಉದ್ಯೋಗದತ್ತ ಸೆಳೆಯಲು ಸಹಾಯಕವೂ ಆಗಿದೆ'' ಎಂದು ಹೇಳಿದರು.

ನಟ ರಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿ, "ಮಂಗಳೂರು ಮತ್ತು ಉಡುಪಿಯಂತಹ ನಗರಗಳಲ್ಲಿ ಜಾಗತಿಕ ಕ್ಲೌಡ್ ಎಂಜಿನಿಯರಿಂಗ್ ಸಂಸ್ಥೆಗೆ ನೀವಿಯಸ್ ಆಧಾರವಾಗುತ್ತಿರುವುದನ್ನು ನೋಡಿ ನನಗೆ ತುಂಬಾ ಆಶ್ಚರ್ಯ ಮತ್ತು ಸಂತೋಷವಾಗಿದೆ. ಈ ಪ್ರದೇಶದಲ್ಲಿ ತಂತ್ರಜ್ಞಾನ, ವೈದ್ಯಕೀಯ ಹಾಗೂ ಕಲೆಗಳ ವಿಚಾರದಲ್ಲಿ ಸಾಕಷ್ಟು ಸಾಮರ್ಥ್ಯ ಗಳಿವೆ. ಒಬ್ಬ ಪ್ರತಿಭೆಯು ಸರಿಯಾದ ಮೂಲಸೌಕರ್ಯ ಪಡೆದಾಗ, ಅವರು ಸಾಧಿಸುವುದಕ್ಕೆ ಯಾವುದೇ ಮಿತಿ ಇಲ್ಲ. ನಾನು ಸ್ಥಳೀಯ ಕಲೆಗಳ ಮತ್ತು ಸಂಪ್ರದಾಯಗಳ ದೊಡ್ಡ ಅಭಿಮಾನಿ. ಸ್ಥಳೀಯ ಸಂಸ್ಕೃತಿಯನ್ನು ಆಧುನಿಕ ಕೆಲಸದ ವಾತಾವರಣದಲ್ಲಿ ಎಷ್ಟು ಸುಂದರವಾಗಿ ಅಳವಡಿಸಲಾಗಿದೆ, ಇದನ್ನು ನಾನು ಬಹಳಷ್ಟು ಇಷ್ಟಪಟ್ಟಿದ್ದೇನೆ" ಎಂದರು.

ನೀವಿಯಸ್ ಸೊಲ್ಯೂಷನ್ಸ್ ಪರಿಚಯ

ನೀವಿಯಸ್ ಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್ ಎನ್ನುವುದು ಕರ್ನಾಟಕದಲ್ಲಿ ಸುಯೋಗ್ ಶೆಟ್ಟಿ, ರಶ್ಮಿ ಜಾರ್ಜ್, ರೋಷನ್ ಬಾವ ಮತ್ತು ಮೊಹ್ಸಿನ್ ಖಾನ್ ಸ್ಥಾಪಿಸಿದ ಬೂಟ್-ಸ್ಟ್ರಾಪ್ಡ್ ಕ್ಲೌಡ್ ಇಂಜಿನಿಯರಿಂಗ್ ಸೇವಾ ಸಂಸ್ಥೆಯಾಗಿದೆ. 2013ರಲ್ಲಿ ಇನ್ಫೋಸಿಸ್, ವಿಪ್ರೋ, ಕಾಗ್ನಿಝೆಂಟ್ ಮತ್ತು ಸೇಪಿಯಂಟ್ ನಂತಹ ಕಂಪೆನಿಗಳೊಂದಿಗೆ ಕೆಲಸ ಮಾಡಿದ ಅನುಭವದೊಂದಿಗೆ ಬಂದ 4 ಸಂಸ್ಥಾಪಕರು ವಿಶ್ವ ದರ್ಜೆಯ ಕ್ಲೌಡ್ ಎಂಜಿನಿಯರಿಂಗ್ ಸೇವಾ ಕಂಪೆನಿಯನ್ನು 2013 ರಲ್ಲಿ ನೀವಿಯಸ್ ಸೊಲ್ಯೂಷನ್ಸ್ ಸ್ಥಾಪಿಸಲಾಯಿತು. ಹತ್ತಿರದ ಶಿಕ್ಷಣ ಕೇಂದ್ರಗಳಾದ ಉಡುಪಿ, ಮಣಿಪಾಲ ಮತ್ತು ಮಂಗಳೂರಿನಲ್ಲಿ ಲಭ್ಯವಿರುವ ಅಗಾಧ ಪ್ರತಿಭಾ ಕೂಟ, ಅಲ್ಲದೆ ದೇಶ, ವಿದೇಶದ ಕೆಲವು ಪ್ರಖರ ಮನಸ್ಸುಗಳು, ಸಂಸ್ಥಾಪಕರಿಗೆ ಅವರ ಕನಸು ನನಸಾಗಬಹುದು ಎಂದು ಮನವರಿಕೆ ಮಾಡಿದರು.

ನೀವಿಯಸ್ ಕಂಪನಿಯು 2019ರಲ್ಲಿ ಗೂಗಲ್ ಕ್ಲೌಡ್ ಇಂಡಿಯಾದೊಂದಿಗೆ ಪ್ರತ್ಯೇಕವಾಗಿ ಪಾಲುದಾರಿಕೆಯ ನಿರ್ಧಾರವನ್ನು ತೆಗೆದುಕೊಂಡಿದೆ ಮತ್ತು 2 ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ 'ಪ್ರೀಮಿಯರ್' ಪಾಲುದಾರಿಕೆ ಮತ್ತು 'ಬ್ರೇಕ್ ಥ್ರೂ ಪಾರ್ಟ್ನರ್ ಆಫ್ ದ ಇಯರ್ - ಏಷ್ಯಾ ಪೆಸಿಫಿಕ್' ಪ್ರಶಸ್ತಿಯನ್ನು 2020 ರಲ್ಲಿ ಗಿಟ್ಟಿಸಿಕೊಂಡಿದೆ. ಕಂಪನಿ ಈಗ ಬೆಂಗಳೂರು, ದೆಹಲಿ, ಮುಂಬೈ ಮತ್ತು ಸಿಂಗಾಪುರ ಸೇರಿದಂತೆ ಅನೇಕ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. 

ಕ್ಲೌಡ್ ಕನ್ಸಲ್ಟಿಂಗ್, ಅಪ್ಲಿಕೇಶನ್ ಆಧುನೀಕರಣ, ಮೂಲ ಸೌಕರ್ಯ ಆಧುನೀಕರಣ, ಡೇಟಾ ಆಧುನೀಕರಣ, ಇನ್ಫ್ರಾಸ್ಟ್ರಕ್ಚರ್ ಇಂತಹ ಉದ್ಯಮಗಳಿಗೆ ಸಹಾಯ ಮಾಡಲು ನವಿಯಸ್ ಕ್ಲೌಡ್ ತಂತ್ರಜ್ಞಾನಗಳನ್ನು ಬಳಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News