ಪ್ರಧಾನಿ ಮೋದಿ ಹುಟ್ಟುಹಬ್ಬದ ಹಿನ್ನೆಲೆ: ಸಾಮಾಜಿಕ ತಾಣದಾದ್ಯಂತ ʼರಾಷ್ಟ್ರೀಯ ನಿರುದ್ಯೋಗ ದಿನʼ ಟ್ರೆಂಡಿಂಗ್‌

Update: 2021-09-17 09:23 GMT

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 71ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ತಾಣದಲ್ಲಿ ಬಿಜೆಪಿ ಬೆಂಬಲಿಗರು ಪ್ರಧಾನಿಯ ಹುಟ್ಟುಹಬ್ಬಕ್ಕೆ ಶುಭ ಕೋರಿದರೆ, ಬಹುತೇಕ ಮಂದಿ ಸಾಮಾಜಿಕ ತಾಣ ಬಳಕೆದಾರರು ಈ ದಿನವನ್ನು ʼರಾಷ್ಟ್ರೀಯ ನಿರುದ್ಯೋಗ ದಿನʼವನ್ನಾಗಿ ಆಚರಿಸಿದ್ದಾರೆ. ಟ್ವಿಟರ್‌ ನಲ್ಲಿ #Nationalunemployementday ಟ್ರೆಂಡಿಂಗ್‌ ಆಗಿದೆ.

"ನಮಗೆ ಅವಶ್ಯಕತೆಯಿಲ್ಲದ ಚರ್ಚೆಗಳನ್ನು ಕೇಳುವುದು ಬೇಕಾಗಿಲ್ಲ ಮೋದೀಜಿ..., ನೀವು ಯುವಕರ ಹಕ್ಕುಗಳ ಕುರಿತು, ಅವರಿಗೆ ಉದ್ಯೋಗ ಕಲ್ಪಿಸುವ ಕುರಿತು ಮಾತನಾಡಿ ಎಂದು ವ್ಯಕ್ತಿಯೋರ್ವರು ಟ್ವೀಟ್‌ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕ ಶಶಿ ತರೂರ್‌ "10,60,139 ಕ್ಕೂ ಹೆಚ್ಚು ಶಿಕ್ಷಕರ ಹುದ್ದೆಗಳು, ಭಾರತೀಯ ಸೇನೆಯಲ್ಲಿ 1,07,000 ಹುದ್ದೆಗಳು ಖಾಲಿ ಇವೆ. ಆದರೆ ನಿರುದ್ಯೋಗವು ಇದುವರೆಗೆ ದಾಖಲಾದ ಗರಿಷ್ಠ ಮಟ್ಟದಲ್ಲಿದೆ. ಈ ನಿಷ್ಕಪಟ ಮತ್ತು ಅಸಮರ್ಥ ಸರ್ಕಾರವನ್ನು ಅದರ ಅನುಕಂಪವಿಲ್ಲದ ಕಾರ್ಯಗಳಿಗೆ ಹೊಣೆಗಾರರನ್ನಾಗಿ ಮಾಡೋಣ!" ಎಂದು ಟ್ವೀಟ್‌ ಮಾಡಿದ್ದಾರೆ.

ಯೂತ್‌ ಕಾಂಗ್ರೆಸ್‌ ಸೇರಿದಂತೆ ಹಲವು ಸಂಘಟನೆಗಳು ಇಂದು ರಾಷ್ಟ್ರೀಯ ನಿರುದ್ಯೋಗ ದಿನ ಆಚರಿಸುತ್ತಿವೆ. ತಮಿಳುನಾಡು, ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಬೃಹತ್‌ ಬ್ಯಾನರ್‌ ಮೂಲಕ ಈ ದಿನವನ್ನು ಪ್ರತಿಭಟನೆಯೊಂದಿಗೆ ಆಚರಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News