ಒಲಿಂಪಿಕ್ಸ್‌ ಚಿನ್ನ ಗೆದ್ದ ಬಳಿಕ ನೀರಜ್‌ ಚೋಪ್ರಾ ಸಾಮಾಜಿಕ ಜಾಲತಾಣ ಮೌಲ್ಯೀಕರಣ 428 ಕೋಟಿ ರೂ.ಗೆ ಏರಿಕೆ !

Update: 2021-09-17 10:22 GMT

ಹೊಸದಿಲ್ಲಿ: ಟೋಕಿಯೋ ಒಲಿಂಪಿಕ್ಸ್‍ನಲ್ಲಿ ಚಿನ್ನದ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಅವರ ಜನಪ್ರಿಯತೆ ಸಾಮಾಜಿಕ ಜಾಲತಾಣಗಳಲ್ಲಿ ತುತ್ತತುದಿಗೇರಿದೆ ಎಂದು hindutantimes ವರದಿ ಮಾಡಿದೆ.

ಅವರು ಚಿನ್ನದ ಪದಕ ವಿಜೇತರಾದಂದಿನಿಂದ ಸಾಮಾಜಿಕ ಮತ್ತು ಡಿಜಿಟಲ್ ಮೀಡಿಯಾದಲ್ಲಿ ಅವರ ಮೌಲ್ಯ ಕೂಡ ಉತ್ತುಂಗಕ್ಕೇರಿದೆ ಎಂದು ಕನ್ಸಲ್ಟೆನ್ಸಿ ಸಂಸ್ಥೆ  YouGov SPORT ಸಂಶೋಧನಾ ವರದಿಯೊಂದು ಹೇಳಿದೆ.

ಸಾಮಾಜಿಕ ಜಾಲತಾಣಗಳಲ್ಲಿ 14 ಲಕ್ಷ  ಮಂದಿ ಅವರನ್ನು 29 ಲಕ್ಷ ಬಾರಿ ಪ್ರಸ್ತಾಪಿಸಿದ್ದಾರೆಂದು ವರದಿ ಹೇಳಿದೆ. ಟೋಕಿಯೋ ಒಲಿಂಪಿಕ್ಸ್ ಸಂದರ್ಭ  ಅವರು ಇನ್‍ಸ್ಟಾಗ್ರಾಂನಲ್ಲಿ ಜಗತ್ತಿನಲ್ಲಿಯೇ ಅತೀ ಹೆಚ್ಚು ಉಲ್ಲೇಖಗಳನ್ನು ಪಡೆದ ಅಥ್ಲೀಟ್ ಎಂದು  ಇನ್ನೊಂದು ವರದಿ ತಿಳಿಸಿದೆ.

ಜಾಗತಿಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚೋಪ್ರಾ ಅವರು 41.2 ಕೋಟಿ ಜನರನ್ನು ತಲುಪಿದ್ದಾರೆ ಹಾಗೂ ಅವರ ಸಾಮಾಜಿಕ ಜಾಲತಾಣ ಮೌಲ್ಯೀಕರಣ ರೂ 428 ಕೋಟಿಯಾಗಿದೆ ಎಂದು ವರದಿ ತಿಳಿಸಿದೆ.

ಅವರು ಒಲಿಂಪಿಕ್ ಚಿನ್ನ ಗೆದ್ದ ನಂತರದ ಅವರ ಒಟ್ಟು ಸಾಮಾಜಿಕ ಜಾಲತಾಣ ಸಂವಹಣಗಳು 1.27 ಕೋಟಿಗೂ ಅಧಿಕವಾಗಿದೆ ಹಾಗೂ ಇದು ಶೇ 86.3 ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ ಎಂದು ವರದಿ ತಿಳಿಸಿದೆ. ಇನ್‍ಸ್ಟಾಗ್ರಾಂನಲ್ಲಿ ಅವರಿಗೆ 40.4 ಲಕ್ಷ ಅನುಯಾಯಿಗಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News