ಬಾಂಧವ್ಯ ಸರಕಾರೇತರ ಸಮಾಜ ಸೇವ ಸಂಸ್ಥೆಗಳ ಒಕ್ಕೂಟದ ವಾರ್ಷಿಕ ಮಹಾಸಭೆ

Update: 2021-09-17 10:25 GMT

ಮಂಗಳೂರು :  ಸಿಒಡಿಪಿ ನಂತೂರು ಪದವು ಸಂಸ್ಥೆಯಲ್ಲಿ ಬಾಂಧವ್ಯ ನಾಮಾಂಕಿತ ಸರಕಾರೇತರ ಸಮಾಜ ಸೇವಾ ಸಂಸ್ಥೆಗಳ ಒಕ್ಕೂಟದ ಮುಖ್ಯಸ್ಥರ ವಾರ್ಷಿಕ ಮಹಾಸಭೆ ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾದ್ಯಕ್ಷರ ಅದ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.

ಸುಸ್ಥಿರ ಸಮಾಜದಲ್ಲಿ ಶಾಂತಿ ಸಮನ್ವಯ ಸಮಾನತೆ ಎಂಬ ದ್ಯೇಯದಿಂದ 22 ಸೆಪ್ಟೆಂಬರ್ 2005 ರಂದು ಹದಿನೇಳು ಸಮಾಜ ಸೇವಾ ಸಂಸ್ಥೆಗಳ ಜಾಲಬಂಧದಿಂದ ಹುಟ್ಟಿ ಬಂದ ಒಕ್ಕೂಟವೇ ಬಾಂಧವ್ಯ.  ಸಮಾಜದ ತೀರಾ ಬಡ ಜನರಿಗೆ ಸೇವೆಗಳನ್ನು ತಲುಪಿಸುವುದು, ನಿರ್ಬಲ ಅನಾರೋಗ್ಯ ಪೀಡಿತ, ಕ್ಯಾನ್ಸರ್, ಬುದ್ಧಿಮಾಂಧ್ಯ ರೋಗಿಗಳಿಗೆ ಪರಿಣಾಮಕಾರಿ ಸೌವಲತ್ತುಗಳನ್ನು ಒದಗಿಸುವುದು, ಜಾತಿ ನಿರ್ಮೂಲನೆ, ಗೃಹಕಾರ್ಮಿಕರನ್ನು ಒಗ್ಗೂಟಿಸುವುದು, ಸಂಸ್ಕೃತಿ, ಪರಂಪರೆಯ ರಕ್ಷಣೆ ಇತ್ಯಾದಿ ಉದ್ದೇಶಗಳಿಂದ ಬಾಂಧವ್ಯ ದಕ್ಷಿಣ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಾ ಇದೆ.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಅತೀ ವಂದನೀಯ ಧರ್ಮಾಧ್ಯಕ್ಷರು ಪೀಟರ್ ಪೌಲ್ ಸಲ್ಡಾನರವರು ವಹಿಸಿದರು.  ಬಾಂಧವ್ಯ ಒಕ್ಕೂಟದ ಮಂಡಳಿ ಸದಸ್ಯರು, ಸದಸ್ಯರು, ನಾಮಾಂಕೀತ ಸದಸ್ಯರು ಒಟ್ಟು 13 ಮಂದಿ ಹಾಜರಿದ್ದರು.  ತನ್ನ ಅಧ್ಯಕ್ಷೀಯ ಸ್ಥಾನದಿಂದ ಸಮಾಜದ ತೀರಾ ಬಡ ಜನರಿಗೆ, ಊಟ ವಸತಿ, ಶಿಕ್ಷಣ ಆರೋಗ್ಯದಲ್ಲಿ ಸೌವಲತ್ತು ಒದಗಿಸುವಲ್ಲಿ ಭಾಂದವ್ಯ ಸಂಸ್ಥೆಯು ಗುರಿ ಮುಟ್ಟಿದೆ ಎಂದು ಬಿಷಪರು ಪ್ರಶಂಸಿದರು.  ಮಂಡಳಿ ಅಧ್ಯಕ್ಷ ವಂದನೀಯ ಸ್ವಾಮಿ ಸಿಬಿ, ಉಪಾಧ್ಯಕ್ಷೆ ಡಾ.| ಜೆಸಿಂತಾ ಹಾಗೂ ಕಾರ್ಯದರ್ಶಿಯವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News